Pani Puri | ಬೀದಿ ಬದಿ ಸಿಗುವ ಪಾನಿ ಪುರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕವರಿಂದ ಹಿಡದು ದೊಡ್ಡವರವರೆಗೂ ಇಲ್ಲರಿಗೂ ಅಚ್ಚುಮೆಚ್ಚು ಈ ರೋಡ್ ಸೈಡ್ ಪಾನಿ ಪುರಿ. ಆದರೆ ವಿಶೇಷ ತಿಂಡಿ ಭಾರತೀಯರನ್ನಷ್ಟೆ ಅಲ್ಲದೆ ವಿದೇಶಿಯರ ಮನಸ್ಸೂ ಗೆದ್ದಿದೆ. ಹೌದು ಇತ್ತೀಚೆಗೆ ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಪಾನಿ ಪುರಿಯೂ ಬಹಳ ಹಿಂದಿನಿಂದಲೂ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ . ಆದರೆ ಈಗ ಪಾನಿ ಪುರಿಗೆ ಜಾಗತಿಕ ಅಭಿಮಾನಿಗಳು ಹೆಚ್ಚುತ್ತಿದ್ದಾರೆ. ಇತ್ತೀಚೆಗೆ ವೈರಲ್ ಆದ ಒಂದು ವೈರಲ್ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದೆ.
ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಅಂತರರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ನಿಯೋಜಿಸಲಾದ ಫುಡ್ ಸ್ಟಾಲ್‌ನಲ್ಲಿ ಇದೀಗ ಪಾನಿ ಪುರಿ ವಿದೇಶಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ವಿದ್ಯಾರ್ಥಿಯೊಬ್ಬ ತನ್ನ ಸ್ಟಾಲ್‌ನಲ್ಲಿ ಪಾನಿ ಪುರಿ ಮಾಡಿ ವಿದೇಶಿ ಆಹಾರ ಪ್ರಿಯರಿಗೆ ವಿತರಿಸಿದ್ದಾರೆ. ಈ ಸಂದರ್ಭದಲ್ಲಿ ಪಾನಿ ಪುರಿಯನ್ನು ಬಾಯಲ್ಲಿಟ್ಟಿ ವಿದೇಶಿ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಒಬ್ಬರ ನಂತರ ಒಬ್ಬರು ಪಾನಿ ಪುರಿ ರುಚಿ ನೋಡಿದ್ದಾರೆ. ಮಸಾಲೆಯುಕ್ತ ಆಲೂಗಡ್ಡೆಯಿಂದ ತುಂಬಿದ ಮತ್ತು ಪುದೀನ-ಹುಣಿಸೇಹಣ್ಣಿನ ರಸದಿಂದ ತುಂಬಿದ ಗರಿಗರಿಯಾದ ಪೂರಿಗಳನ್ನು ಸವಿದು ಆಶ್ಚರ್ಯ, ನಗು, ಸಂತೋಷ ಹೊರಹಾಕಿದ್ದಾರೆ. (ಏಜೆನ್ಸೀಸ್)