Indian : ವಿದೇಶಿ ಯುವಕನೊಬ್ಬನು ಬೀಚ್‌ಗೆ ತೆರಳಿದ ಸಂದರ್ಭದಲ್ಲಿ ಭಾರತೀಯರ ಉಡುಗೆ ತೊಡುಗೆಯನ್ನು ನೋಡಿ ಶಾಕ್ ಆಗಿದ್ದಾನೆ. ಭಾರತೀಯರು ಯಾಕೆ ಹೀಗೆ ಎಂದು ಪ್ರಶ್ನೆ ಮಾಡಿದ್ದು ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
georgebxckley ಹೆಸರಿನ ಖಾತೆಯಲ್ಲಿ ವಿದೇಶಿ ಯುವಕ, ನಾನು ಭಾರತದ ಪ್ರವಾಸದ ವೇಳೆಯಲ್ಲಿಮೊದಲು ಬೀಚ್ ತಲುಪಿದೆ. ಆದರೆ ಇಲ್ಲಿ ಯಾರು ಕೂಡ ಟಾಪ್ ಲೆಸ್ ಆಗಿಲ್ಲ, ಇಲ್ಲಿ ಎಲ್ಲರೂ ಮೈ ತುಂಬಾ ಬಟ್ಟೆ ಧರಿಸಿದ್ದಾರೆ.
ಮತ್ತೆ ಎಲ್ಲರೂ ಕೂಡ ಮೈ ತುಂಬಾ ಬಟ್ಟೆ ಧರಿಸಿಕೊಂಡಿದ್ದಾರೆ, ಯಾಕೆ ಈ ರೀತಿ ಎಂದು ನನಗೆ ಅರ್ಥವಾಗುತ್ತಿಲ್ಲ . ಇಲ್ಲಿ ಏನಾದರೂ ಬಟ್ಟೆ ಬಿಚ್ಚಬಾರದು ಎನ್ನುವ ರೂಲ್ಸ್ ಇದೆಯೇ ಎಂದು ಭಯದಿಂದಲೇ ಹೇಳುತ್ತಾ, ಶರ್ಟ್ ತೆಗೆದಿಟ್ಟು ಸಮುದ್ರಕ್ಕೆ ಇಳಿದು ಎಂಜಾಯ್ ಮಾಡಿದ್ದಾನೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು, ಇದು ಭಾರತ, ಇಲ್ಲಿ ಯಾರು ತಮ್ಮ ದೇಹವನ್ನು ತೋರಿಸುವುದಿಲ್ಲ.. ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆ ಶ್ರೀಮಂತವಾಗಿದೆ. ಬೀಚ್‌ಗೆ ಹೋಗಿದ್ರೆ ವಿದೇಶಿಗರನ್ನು ಹೆಚ್ಚಾಗಿ ತುಂಡುಡುಗೆಯಲ್ಲೇ ನೋಡಿರುತ್ತೀರಿ... ಯಾವುದೇ ದೇಶಕ್ಕೆ ತೆರಳುವ ಮೊದಲು ಅಲ್ಲಿನ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ತಿಳಿದುಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.