ನ್ಯೂಸ್

ಲಾಕ್​ಡೌನ್​ ಬಂದೋಬಸ್ತ್​ ನಡುವೆಯೂ ಈ ವಿದೇಶಿ ಪ್ರಜೆ ಮಾದಕ ವಸ್ತು ಮಾರುತ್ತಿದ್ದ...!

ಬೆಂಗಳೂರು: ಲಾಕ್​ಡೌನ್ ಬಂದೋಬಸ್ತ್ ನಡು ವೆಯೂ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಕೆ.ಆರ್. ಪುರ ಪೊಲೀಸರು ಬಂಧಿಸಿದ್ದಾರೆ. ಭಟ್ಟರಹಳ್ಳಿಯಲ್ಲಿ ವಾಸವಾಗಿರುವ ನೈಜೀರಿಯಾ ಪ್ರಜೆ ಚಿಬುಕಿ (20) ಬಂಧಿತ.

ಈತನಿಂದ ಮಾದಕ ವಸ್ತು ಎಂಡಿಎಂಎ ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಚಿಬುಕಿ ಪತ್ನಿ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಭಾನುವಾರ ( ಏ.26) ಬೆಳಗ್ಗೆ 11 ಗಂಟೆಯಲ್ಲಿ ವೈಟ್​ಸಿಟಿ ಲೇಔಟ್ 2ನೇ ಕ್ರಾಸ್​ನಲ್ಲಿ ರಸ್ತೆ ಬದಿ ನಿಂತು ಎಂಡಿಎಂಎ ಮಾರುತ್ತಿದ್ದ. ಈ ಕುರಿತು ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ವ್ಯಾಪಾರ ವೀಸಾದಲ್ಲಿ ಭಾರತಕ್ಕೆ ಬಂದು ನಗರದಲ್ಲಿ ನೆಲೆಸಿರುವ ಆರೋಪಿ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.