ನವದೆಹಲಿ: ಯುವ ಪೀಳಿಗೆ ಭವಿಷ್ಯದ ದೃಷ್ಟಿಯಿಂದ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವೈಯಕ್ತಿಕವಾಗಿ ಮನವಿ ಮಾಡುತ್ತಿದ್ದೇನೆ...! ಅಂತಿಮ ಸೆಮಿಸ್ಟರ್, ವರ್ಷದ ಪರೀಕ್ಷೆಯನ್ನೂ ರದ್ದು ಮಾಡಿ...
ಯುಜಿಸಿ ಮಾರ್ಗಸೂಚಿ ಅನ್ವಯ, ಮಧ್ಯಂತರ ಸೆಮಿಸ್ಟರ್ಗಳ ಪರೀಕ್ಷೆ ರದ್ದು ಮಾಡಲಾಗಿದ್ದರೂ, ಅಂತಿಮ ಸೆಮಿಸ್ಟರ್ಗಳ ಪರೀಕ್ಷೆ ನಡೆಸುವುದಾಗಿ ಬೆಂಗಳೂರು ಸೇರಿ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಈಗಾಗಲೇ ಘೋಷಿಸಿವೆ.
ಇದನ್ನೂ ಓದಿ; ಕಾಠ್ಮಂಡು ಕಂಗೆಡಿಸುವ, ಶಿಮ್ಲಾ, ದೆಹಲಿ ನಡುಗಿಸುವ ವಿದ್ಯಮಾನ ಬಾಕಿಯಿದೆ…! ಯಾವುದೇ ಕ್ಷಣವೂ ಸಂಭವಿಸಬಹುದು
ಆದರೆ, ಈ ಪರೀಕ್ಷೆಗಳನ್ನು ರದ್ದು ಮಾಡಿ ಎಂಬ ಒತ್ತಾಯವೂ ಕೇಳಿ ಬಂದಿದೆ. ವಿದ್ಯಾರ್ಥಿಗಳಳಿಂದ ಮಾತ್ರವಲ್ಲ, ಅವರ ಪರವಾಗಿ ಈ ಮನವಿ ಮಾಡಿದ್ದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್.
ದೆಹಲಿ ಸರ್ಕಾರದ ಕಾಲೇಜು ಹಾಗೂ ವಿವಿಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಯೂ ಸೇರಿ ಎಲ್ಲವನ್ನೂ ರದ್ದು ಮಾಡಲಾಗಿದೆ. ಆದರೆ, ದೆಹಲಿ ಹಾಗೂ ಇತರ ಕೇಂದ್ರೀಯ ವಿವಿಗಳ ಅಂತಿಮ ಪರೀಕ್ಷೆ ನಡೆಸುವುದಾಗಿ ಯುಜಿಸಿ ತಿಳಿಸಿದೆ. ಹೀಗಾಗಿ ಪ್ರಧಾನಿ ಮೋದಿಯೇ ಮಧ್ಯಪ್ರವೇಶಿಸಬೇಕೆಂದು ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ಹುಲಿ ಗಣತಿಗೆ ಪಟ್ಟ ಪಾಡು ಎಂಥದ್ದು? ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಯ್ತು 6.20 ಲಕ್ಷ ಮಾನವ ದಿನಗಳ ಶ್ರಮ
ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಕಷ್ಟವಾಗುವುದರಿಂದ ದೆಹಲಿ ಸರ್ಕಾರ ಎಲ್ಲ ಪರೀಕ್ಷೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.