ಬೆಂಗಳೂರು: ಜಗತ್ತಿನಾದ್ಯಂತ ಕರೊನಾ ಹಾವಳಿ ಹೆಚ್ಚುತ್ತಿರುವ ಮಧ್ಯೆಯೇ ಒಂದು ಆಶಾದಾಯಕ ಸುದ್ದಿ ಹೊರಬಿದ್ದಿದೆ. ರಷ್ಯಾದ ಕರೊನಾ ಲಸಿಕೆಗೆ ಇನ್ನು ಕೆಲವೇ ವಾರಗಳಲ್ಲಿ ಭಾರತದಲ್ಲಿ ಅಂತಿಮ ಟ್ರಯಲ್ ನಡೆಯಲಿದೆ.
ಕರೊನಾ ವಿರುದ್ಧ ರಷ್ಯಾ ಕಂಡುಹಿಡಿಯುತ್ತಿರುವ 'ಸ್ಪುಟ್ನಿಕ್-ವಿ' ಕರೊನಾ ಲಸಿಕೆಗೆ ಭಾರತದಲ್ಲಿ ಡಾ. ರೆಡ್ಡಿ ಲ್ಯಾಬೊರೇಟರೀಸ್ ಲಿ. ಸಂಸ್ಥೆ ಅಂತಿಮ ಟ್ರಯಲ್ ಕೈಗೊಳ್ಳಲಿದೆ ಎಂಬ ಮಾಹಿತಿ ಔಷಧ ಕಂಪನಿಗಳ ವಲಯದಿಂದ ಹೊರಬಿದ್ದಿದೆ.
ಈ ಟ್ರಯಲ್ಗೆ 1ರಿಂದ 2 ಸಾವಿರ ಮಂದಿ ನೋಂದಾಯಿಸಿಕೊಳ್ಳಲಿದ್ದು, ದೇಶಾದ್ಯಂತದ ವಿವಿಧ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಟ್ರಯಲ್ ನಡೆಯಲಿದೆ. ಈ ಬಗ್ಗೆ ರಷ್ಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ (ಆರ್ಡಿಐಎಫ್) ಮತ್ತು ಡಾ.ರೆಡ್ಡಿ ಲ್ಯಾಬೊರೇಟರೀಸ್ ಸಂಸ್ಥೆ ನಡುವೆ ಒಪ್ಪಂದ ಏರ್ಪಟ್ಟಿದೆ. ವರ್ಷಾಂತ್ಯದ ವೇಳೆಗೆ ಭಾರತಕ್ಕೆ ವ್ಯಾಕ್ಸಿನ್ ಪೂರೈಕೆ ಆಗಬಹುದು ಎಂದು ಆರ್ಡಿಐಎಫ್ ಹೇಳಿಕೊಂಡಿದ್ದರೂ ಈ ಟ್ರಯಲ್ಗೆ ಕೆಲವು ತಿಂಗಳುಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)