Monsoon health tips : ಮಳೆಗಾಲವು ಸಾಮಾನ್ಯವಾಗಿ ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾಗುವ ಸಮಯ. ಈ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವ, ಬೆಚ್ಚಗಿನ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಉತ್ತಮ ಆರೋಗ್ಯಕ್ಕಾಗಿ ಮಳೆಗಾಲ ಮುಗಿಯುವವರೆಗೂ ಈ ಆಹಾರಗಳನ್ನು ತಿನ್ನಲೇ ಬಾರದು ಎನ್ನುವ ಕುರಿತಾಗಿ ನಾವು ಇಂದು ತಿಳೀದುಕೊಳ್ಳೋಣ...
ಬೀದಿ ಆಹಾರ ಸ್ವಚ್ಚತೆ ಇಲ್ಲದೆ ತಯಾರಿಸಿದ ಆಹಾರ ವಿಷವಾಗುವ ಅಪಾಯವಿದೆ. ಹೀಗಾಗಿ ಬೀದಿ ಬದಿಯ ಆಹಾರ ಸೇವನೆಯನ್ನು ತಪ್ಪಿಸಿ. ಚೆನ್ನಾಗಿ ಬೇಯಿಸದ ಮತ್ತು ನೈರ್ಮಲ್ಯವಿಲ್ಲದ ಸಲಾಡ್‌ಗಳು ಮತ್ತು ಹಣ್ಣುಗಳನ್ನು ತಪ್ಪಿಸಿ. ಹುರಿದ ಮತ್ತು ಡೀಪ್ ಫ್ರೈ ಮಾಡಿದ ಆಹಾರಗಳು ಜೀರ್ಣಿಸಿಕೊಳ್ಳಲು ಕಷ್ಟ. ಇವು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತವೆ. ತಂಪು ಪಾನೀಯಗಳು ಮತ್ತು ಐಸ್ ಕ್ರೀಮ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಶೀತ ಮತ್ತು ಗಂಟಲು ನೋವಿಗೆ ಕಾರಣವಾಗಬಹುದು. ರೆಫ್ರಿಜರೇಟರ್‌ನಲ್ಲಿಟ್ಟು ಮತ್ತೆ ಬಿಸಿ ಮಾಡಿದ ಆಹಾರವನ್ನು ಸೇವಿಸಬೇಡಿ. ಜೀರ್ಣಿಸಿಕೊಳ್ಳಲು ಕಷ್ಟ. ಮೊಳಕೆಯೊಡೆದ ದ್ವಿದಳ ಧಾನ್ಯಗಳು ಅಜೀರ್ಣ ಮತ್ತು ವಾಯು ಸಮಸ್ಯೆಗೆ ಕಾರಣವಾಗುವ ಸಾಧ್ಯತೆಯಿದೆ. ಮಳೆಗಾಲದಲ್ಲಿ ಸಮುದ್ರಾಹಾರ ಮತ್ತು ಚಿಪ್ಪುಮೀನುಗಳ ಮೂಲಕ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ. ಮಳೆಗಾಲದಲ್ಲಿ ಸುಲಭವಾಗಿ ಜೀರ್ಣವಾಗುವ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಆರಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.