ನ್ಯೂಸ್

ವಿದ್ಯುತ್​​ ದರ ಹೆಚ್ಚಳ ಮಾಡಿದ ಸರ್ಕಾರ : ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಕರೆಂಟ್​ ಶಾಕ್​! | Electricity

Electricity : ರಾಜ್ಯದ ಜನತೆಗೆ ಹಾಲಿನ ಬೆಲೆ ಏರಿಕೆ ಮಾಡಿರುವ ಸರ್ಕಾರ ಇದೀಗ ಗಾಯದ ಮೇಲೆ ಬರೆ ಎಂಬಂತೆ ವಿದ್ಯುತ್​ ಹೆಚ್ಚಳದ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಗುರುವಾರ(ಮಾ.27) ಅಧಿಕೃತ ಆದೇಶ ಹೊರಡಿಸಿದೆ.

ಏಪ್ರಿಲ್ 1 ರಿಂದ ಅನ್ವಯ ಆಗುವಂತೆ ದರ ಪರಿಷ್ಕರಣೆಗೆ ಸರ್ಕಾರ ಮಾಡಿದ್ದು, ಪ್ರತಿ ಯೂನಿಟ್​ಗೆ 36 ಪೈಸೆ ಹೆಚ್ಚಳ ಮಾಡಲಾಗಿದೆ ಎಂದು ಆದೇಶದಲ್ಲಿನ ಉಲ್ಲೇಖಿಸಲಾಗಿದೆ. ಯುಗಾದಿಗೆ ಗಿಫ್ಟ್ ನೀಡಬೇಕಾದ ಸರ್ಕಾರದಿಂದ ಶಾಕ್ ಮೇಲೆ ಶಾಕ್ ನೀಡಿದೆ.