ನ್ಯೂಸ್

ಮದುವೆಯಾಗಿ 20 ದಿನ..ಇನ್​​ಸ್ಟಾಗ್ರಾಮ್​​ ಸ್ನೇಹಿತನನ್ನು ವಿವಾಹವಾದ ಜಾನಪದ ಗಾಯಕಿ ಸಾವು..Folk Singer

ತೆಲಂಗಾಣ : (Folk Singer )ಸೋಷಿಯಲ್ ಮೀಡಿಯಾದಲ್ಲಿ  ಪರಿಚಯವಾದ ಒಬ್ಬ ವ್ಯಕ್ತಿಯನ್ನು ಪ್ರೀತಿಸಿ   ವಿವಾಹವಾಗಿದ್ದ ಜನಪದ ಗಾಯಕಿ ಮದುವೆಯಾದ ಮೂರು ವಾರಗಳ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಆದರೆ ಸಿದ್ದಿಪೇಟೆ ಜಿಲ್ಲೆಯಲ್ಲಿ  ನಡೆದಿದೆ.

ನಿಜಾಮಾಬಾದ್ ಜಿಲ್ಲೆ ಮೊಸರ ಮಂಡಲದ ತಿಮ್ಮಾಪುರ ಗ್ರಾಮದ ಶ್ರುತಿ (ಜನಪದ ಗಾಯಕಿ) Folk Singer ಅವರು ಸಿದ್ದಿಪೇಟೆ ಜಿಲ್ಲೆ ಜಗದೇವಪುರ ಮಂಡಲದ ಪಿರ್ಲಪಲ್ಲಿ ಗ್ರಾಮದ ದಯಾಕರ್ ಎಂಬ ಯುವಕನನ್ನು ಇನ್‌ಸ್ಟಾಗ್ರಾಂನಲ್ಲಿ ಭೇಟಿಯಾಗಿದ್ದರು. ಇಬ್ಬರ ಪರಿಚಯ   ಪ್ರೀತಿಗೆ ತಿರುಗಿತು.

 ಶ್ರುತಿ ಜನಪದ ಗೀತೆಗಳನ್ನು ಹಾಡುವ ಜನಪ್ರಿಯ ಗಾಯಕಿಯಾಗಿದ್ದು, ಹೈದರಾಬಾದ್‌ನಲ್ಲಿ ನೆಲೆಸಿದ್ದರು. ಇದೇ ಅನುಕ್ರಮದಲ್ಲಿ ದಯಾಕರ್ ಎಂಬಾತನನ್ನು ಪ್ರೀತಿಸುತ್ತಿದ್ದ ಆಕೆ ಆಗಾಗ ದಯಾಕರ್ ಮನೆಯಾದ ಪಿರ್ಲಪಲ್ಲಿ ಗ್ರಾಮಕ್ಕೆ ಬರುತ್ತಿದ್ದಳು. ಅಷ್ಟರಲ್ಲಿ ಇಬ್ಬರ ಪೋಷಕರ ಮನವೊಲಿಸಿ ಮದುವೆ ಮಾಡಿಸಲು ಮುಂದಾಗಿದ್ದರು.. ಆದರೆ, ಈ ಮದುವೆಗೆ ಶ್ರುತಿಯ ಪೋಷಕರು ಒಪ್ಪದ ಕಾರಣ ಕಳೆದ ಇಪ್ಪತ್ತು ದಿನಗಳ ಹಿಂದೆ ದಯಾಕರ್ ಅವರ ಮನೆಯಲ್ಲಿ ಇಬ್ಬರೂ ವಿವಾಹವಾಗಿದ್ದರು. ಮದುವೆಯಾಗಿ 20 ದಿನ ಕಳೆದರೂ ಏನಾಯಿತೋ ಗೊತ್ತಿಲ್ಲ, ಜಾನಪದ ಗಾಯಕಿ ಶ್ರುತಿ ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಗಜ್ವೇಲ್ ಆಸ್ಪತ್ರೆಗೆ ರವಾನಿಸಿದ್ದು, ಶೃತಿ ಆತ್ಮಹತ್ಯೆ ಮಾಡಿಕೊಂಡಿಲ್ಲ,  ಕಿರುಕುಳವೇ ಕಾರಣ ಎಂದು  ಆಕೆ ಹೆತ್ತವರು ದೂರುತ್ತಿದ್ದಾರೆ. 

ಅಸಲಿಗೆ ಶೃತಿ ಯಾಕೆ ಸತ್ತಳು.. ಏನು ಕಷ್ಟ ಆಯ್ತು..? ಕಾರಣಗಳೇನು ಎಂಬುದು  ನಿಗೂಢವಾಗಿಯೇ  ಉಳಿದಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.