ಕೋಟ: ಅನಾಥ ಗೋವುಗಳಿಗೆ ಮೇವು ಒದಗಿಸುವ ಕಾರ್ಯ ಭಗವಂತನ ಭಕ್ತಿ ಮಾರ್ಗದಲ್ಲೊಂದು ಎಂದು ಪಾರಂಪಳ್ಳಿ ಕೃಷಿಕ ರವೀಂದ್ರ ಐತಾಳ್ ಹೇಳಿದರು.
ಭಾನುವಾರ ಕೋಟ ವ್ಯಾಪ್ತಿಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಸಾರಥ್ಯದಲ್ಲಿ ನಡೆದ ಗೋವಿಗಾಗಿ ನಾವು, ಪ್ರಚಾರಕಲ್ಲ ಪ್ರೇರಣೆಗಾಗಿ ಅಭಿಯಾನದ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯಮಿ ವಿಜಯ ಶೆಟ್ಟಿ ಆವರ್ಸೆ, ಆವರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಆವರ್ಸೆ ಗ್ರಾಮ ಪಂಚಾಯಿತಿ ಸದಸ್ಯರಾದ ದಿವಾಕರ್ ಗಾಣಿಗ, ಶಂಕರ್ ಪೂಜಾರಿ, ಆವರ್ಸೆ ಗುತ್ತಿಗೆದಾರ ಚಂದ್ರ ಪೂಜಾರಿ ಆವರ್ಸೆ, ಹೆರಿಯ ಕುಲಾಲ್ ಆವರ್ಸೆ, ಶಿವರಾಮ ನಾಯ್ಕ ಕಿರಾಡಿ ಇತರರಿದ್ದರು.