ಕೊತ್ತೂರು ಜಿ.ಮಂಜುನಾಥ್​ 
ನ್ಯೂಸ್

ಅಭಿವೃದ್ಧಿ ಗಮನ ನೀಡುವುದಷ್ಟೇ ಆದ್ಯತೆ

ಕಿರುವಾರ ಎಸ್.ಸುದರ್ಶನ್

ಕೋಲಾರ: ನಮ್ಮ ಗಮನ ಅಭಿವೃದ್ಧಿಯ ಕಡೆಗೆ ಹೊರತು, ಯಾರೋ ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯೆ ಕೊಡುವುದಕ್ಕಲ್ಲ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಮಂತ್ರಿ ಬದಲಾವಣೆ ಕುರಿತು ಎಸ್​.ಎನ್​.ನಾರಾಯಣಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಭಾನುವಾರ 20 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುತ್ತಿದೆ, ಈ ಬಗ್ಗೆ ಯಾರು ಬೇಕಾದರೂ ಕೇಳಲಿ ಹೇಳುತ್ತೇವೆ ಎಂದ ಅವರು, ರಾಜ್ಯದ ಉಸ್ತುವಾರಿ ಸುರ್ಜೇವಾಲ ಸಭೆ ಕರೆದಾಗ ಕೋಲಾರ ಜನ ಗೆಲ್ಲಿಸಿದ್ದಾರಲ್ಲ, ಇದಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ್ದರು. ಈ ರೀತಿ ಚರ್ಚೆ ಅಗತ್ಯ ಎಂದರು.

ವೇಮಗಲ್​-ಕುರುಗಲ್​ ಪಟ್ಟಣ ಪಂಚಾಯಿತಿ ಲಿತಾಂಶ ಕುರಿತು ಮಾತನಾಡಿ, ವಿಧಾನಸಭೆ, ಸಂಸತ್​ ಚುನಾವಣೆಗಳಿಗಿಂತ ಈ ಚುನಾವಣೆಯಲ್ಲಿ 3,400 ಮತ ಹೆಚ್ಚು ಮಂದಿದೆ, ಸ್ಥಾನಗಳು ಕಡಿಮೆ ಬಂದಿರಬಹುದು, ಆದರೆ ಮತ ಪಡೆಯುವಲ್ಲಿ ನಾವೇ ಮುಂದಿದ್ದೇವೆ ಎಂದರು.

ಯಾವ ಚುನಾವಣೆಯೂ ಯಾವ ಚುನಾವಣೆಗೂ ದಿಕ್ಸೂಚಿಯಲ್ಲ. ಇಂತಹದನ್ನೆಲ್ಲ ಮೊದಲಿಂದಲೂ ನೋಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

38 ವಿಷಯಗಳನ್ನು ಕೆಯುಡಿಎ ಸಭೆಯಲ್ಲಿ ಇಟ್ಟುಕೊಂಡು ಚರ್ಚಿಸಲಾಗಿದೆ, ಅದರಲ್ಲಿ 5&6 ವಿಷಯಗಳನ್ನು ಬಾಕಿ ಇದ್ದು, ಪರಿಶೀಲನೆ ನಂತರ ಅನುಮೋದನೆ ನೀಡಲಾಗುವುದು, ಕ್ಷೇತ್ರದಲ್ಲಿ ಅಭಿವೃದ್ಧಿಯೂ ಚುರುಕಾಗಿ ನಡೆಯುತ್ತಿದೆ, ಈ ಸಂಬಂಧ ದಾಖಲೆಗಳನ್ನು ಕೇಳಿದರೆ ಕೊಡಲಾಗುವುದು ಎಂದು ಹೇಳಿದರು.

* ಗೊತ್ತಿಲ್ಲದೆ ಸಾಕಷ್ಟು ಮಾಡ್ತಿದ್ದಾರೆ

ಜಾತಿ ಪ್ರಮಾಣ ಪತ್ರ ಕುರಿತ ಕೆ.ಎಚ್​.ಮುನಿಯಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಂಜುನಾಥ್​, ಈ ವಿಚಾರವು 2004ರಿಂದಲೂ ನಡೆಯುತ್ತಲೇ ಇದೆ, ನನ್ನ ಜಾತಿ ಯಾವುದೆಂದು ತೀರ್ಮಾನ ಮಾಡಲು ಅವರ್ಯಾರು ಎಂದು ಪ್ರಶ್ನಿಸಿದರು. ನನ್ನ ಜಾತಿ ತೀರ್ಮಾನ ಮಾಡುವುದು ನಮ್ಮ ಅಪ್ಪ, ಅಪ್ಪ, ಜಿಲ್ಲೆಯ ಗೇಜೆಟೇಡರ್​. ಇಂತಹ ಪಿತೂರಿಯನ್ನು ಮೊದಲಿಂದಲೂ ನಡೆಸಿಕೊಂಡು ಬರುತ್ತಿದ್ದು, ಇನ್ನು ಗೊತ್ತಿಲ್ಲದೆ ಬಹಳಷ್ಟು ಮಾಡಿದ್ದಾರೆ. ಇದಕ್ಕೆಲ್ಲ ಒಂದು ದಿನ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.