ನ್ಯೂಸ್

ಕೇಂದ್ರ ಬಜೆಟ್​ 2020: ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ; ಇಲ್ಲಿದೆ ನೋಡಿ ಹೊಸ ನಿಯಮದ ಪಟ್ಟಿ...

ನವದೆಹಲಿ: ವೈಯಕ್ತಿಕ ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಬಂಪರ್​ ಬಹುಮಾನ ನೀಡಿದೆ.

ಬಜೆಟ್​ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್​ ಆದಾಯ ತೆರಿಗೆ ನಿಯಮಗಳನ್ನು ಸರಳೀಕೃತಗೊಳಿಸಿದ್ದಾಗಿ ತಿಳಿಸಿದರು. ಅದರ ಪ್ರಕಾರ ಹೊಸ ತೆರಿಗೆ ಪದ್ಧತಿ ಹೀಗಿದೆ.

ವಾರ್ಷಿಕ 5ರಿಂದ 7.5 ಲಕ್ಷ ರೂಪಾಯಿ ಆದಾಯ ಇರುವವರಿಗೆ 10 ಪರ್ಸಂಟ್​

7.5 ಲಕ್ಷದಿಂದ 10 ಲಕ್ಷ ರೂ.ವರೆಗಿನ ಆದಾಯ ಇರುವವರಿಗೆ 15 ಪರ್ಸಂಟ್​

10 ಲಕ್ಷ ರೂ.ದಿಂದ 12.5 ಲಕ್ಷ ರೂ.ವರೆಗಿನ ಆದಾಯಕ್ಕೆ 20 ಪರ್ಸಂಟ್​

12.5 ಲಕ್ಷ ರೂ.ದಿಂದ 15 ಲಕ್ಷ ರೂ.ವರೆಗೆ ಆದಾಯ ಹೊಂದುವವರಿಗೆ 25 ಪರ್ಸಂಟ್​

ಹಾಗೂ 15 ಲಕ್ಷ ರೂ.ಮೇಲ್ಪಟ್ಟು ಆದಾಯ ಇರುವವರು ಶೇ.30 ರಷ್ಟು ತೆರಿಗೆ ತುಂಬಬೇಕು.

5 ಲಕ್ಷ ರೂ.ವರೆಗೆ ಯಾವುದೇ ತೆರಿಗೆಯಾಗಲೀ, ಪ್ರಮಾಣಿತ ಕಡಿತಗಳಾಗಲೀ ಅನ್ವಯ ಆಗುವುದಿಲ್ಲ. (ಏಜೆನ್ಸೀಸ್​)