ನ್ಯೂಸ್

ಡಿಸೆಂಬರ್‌ಗೆ ವಿಮಾನ ನೈಟ್ ಲ್ಯಾಂಡಿಂಗ್

ನವೀನ ಬಿ.ಎಂ

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ ಬಳಿಕ ನೈಟ್ ಲ್ಯಾಂಡಿಂಗ್ ಶುರುವಾಗಲಿದೆ. ಅದಕ್ಕೆ ಬೇಕಾದ ಪರಿಕರಗಳನ್ನು ಈಗಾಗಲೇ ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

6.5 ಕೋಟಿ ರೂ. ಹೆಚ್ಚುವರಿ ಅನುದಾನ ಬೇಕಾಗಿತ್ತು. ಕೆಎಸ್‌ಐಡಿಸಿಯಿಂದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಹೋಗಿದ್ದು, ಅನುದಾನ ನೀಡುವ ಬಗ್ಗೆ ಭರವಸೆ ವ್ಯಕ್ತವಾಗಿದೆ. ನೈಟ್ ಲ್ಯಾಂಡಿಂಗ್ ಕೆಲಸ ಮುಗಿಸಲು ಕನಿಷ್ಠ ಮೂರು ತಿಂಗಳು ಬೇಕಾಗಲಿದೆ ಎಂದರು.

ಸಿಗಂದೂರು ಲಾಂಚ್‌ಗಳನ್ನು ಪ್ರವಾಸೋದ್ಯಮಕ್ಕೆ ಬಳಕೆ ಮಾಡಿಕೊಳ್ಳಲಾಗುವುದು. ಈ ಸಂಬಂಧ ಶಾಸಕ ಗೋಪಾಲಕೃಷ್ಣ ಬೇಳೂರು ಒಲವು ತೋರಿದ್ದಾರೆ. ಕೊಡಚಾದ್ರಿ ಬೆಟ್ಟದಲ್ಲಿ ವಾಹನಗಳ ದರ ನಿಗದಿ ಮಾಡಲಾಗುವುದು. ದರಪಟ್ಟಿ ಅಳವಡಿಸಲಾಗುವುದು ಎಂದರು.