ಸಕ್ಕರೆ ಕಾರ್ಖಾನೆಗಳಿಂದ ಹೂರ ಬರುವ ಇಂಥ ತ್ಯಾಜ್ಯ ವನ್ನು ಸಹ-ವಿದ್ಯುದ್ವಿಭಜನೆ (ಕೋ- ಎಲೆಕ್ಟೋ›ಲಿಸಿಸ್) ಪ್ರಕ್ರಿಯೆಗೆ ಒಳಪಡಿಸುವ ಮೂಲಕ ಎಸ್ಎಎಫ್ ಪಡೆಯುವ ಪ್ರಯೋಗಗಳನ್ನು ನಡೆಸುವಂತೆ ಸರ್ಕಾರ ಉತ್ತೇಜಿಸುತ್ತಿದೆ.
- ಕಬ್ಬು ಅರೆಯುವಾಗ ಸಕ್ಕರೆ ಕಾರ್ಖಾನೆಗಳಿಂದ ಹೊರಸೂಸುವ ತ್ಯಾಜ್ಯದಿಂದ ಸುಸ್ಥಿರ ವೈಮಾನಿಕ ಇಂಧನ (ಎಸ್ಎಎಫ್).
- ಹೊಸ ಆವಿಷ್ಕಾರ ಬಳಕೆಗೆ ಕೇಂದ್ರ ಸರ್ಕಾರ ಕಾರ್ಯೋನ್ಮುಖ.
- ಇದು ಹೊಸ ವಿಧಾನವೇನೂ ಅಲ್ಲ ಈ ಹಿಂದಿನಿಂದ ಚಾಲನೆಯಲ್ಲಿರುವ ತಂತ್ರಜ್ಞಾನವೆ. ಆದರೆ, ಈಗ ಇದು ಕೈಗಾರಿಕೆಯ ಪ್ರಯೋಗಕ್ಕೆ ಪಕ್ವವಾಗಿದೆ.
- ದುಬಾರಿಯಾಗಿರುವ ಪಳೆಯುಳಿಕೆ ಇಂಧನಕ್ಕೆ ಪರ್ಯಾಯವಾಗುವ ಹೊಸ ದಾರಿಯನ್ನು ತೋರಿದೆ.
- ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ಪರಿಸರ ಸ್ನೇಹಿ ಇಂಧನ ಆಗಿದೆ.
- ಅಂಥ ಒಂದು ಪ್ರಯೋಗವನ್ನು ಪುಣೆಯ ಮೂಲದ ಕಂಪನಿ ‘ಎಚ್2ಇ ಪವರ್ ಸಿಸ್ಟಂ ಮಾಡುತ್ತಿದೆ.
- ಈ ಪ್ರಯೋಗ ಯಶಸ್ವಿಯಾದರೆ, ಮಹಾರಾಷ್ಟ್ರದ ಕೆಲವು ಸಕ್ಕರೆ ಕಾರ್ಖಾನೆಗಳು ಎಸ್ಎಎಫ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಒಲವು ತೋರಿಸಿವೆ.
ಸಹ-ವಿದ್ಯುದ್ವಿಭಜನೆ ಎಂದರೆ?: ನೀರಿನಿಂದ ಜಲಜನಕ ಮತ್ತು ಆಮ್ಲಜನಕವನ್ನು ವಿದ್ಯುತ್ ಬಳಕೆ ಮಾಡಿ ಪ್ರತ್ಯೇಕ ಮಾಡುವ ವಿಧಾನ. ಈ ಪ್ರಕ್ರಿಯೆಯಲ್ಲಿ ಇಂಗಾಲದ ಡೈಆಕ್ಸೆೈಡ್ ಕೂಡ ವಿಘಟಿಸಿ ಸಿನ್ ಗ್ಯಾಸ್ ಆಗುತ್ತದೆ. ಅದು ಇಂಗಾಲದ ಮಾನಾಕ್ಸೆೈಡ್ ಮತ್ತು ಜಲಜನಕವಾಗುತ್ತದೆ. ಸಿನ್ ಗ್ಯಾಸ್ ಅಥವಾ ಸಿನ್ ಕಚ್ಚಾ ಸಂಯುಕ್ತವು ವೈಮಾನಿಕ ಇಂಧನದ ತಯಾರಿಕೆಗೆ ಅಗತ್ಯವಾದ ಇಂಗಾಲಾಧಾರಿತ ರಾಸಾಯನಿಕ ವಿಂಗಡನೆಯ ಮೂಲಧಾತು ಆಗಿದೆ.