ನ್ಯೂಸ್

ಚಿತ್ರ ವಿ-ಚಿತ್ರ ಹಣ ಗಳಿಸಲು ಮೋಸದ ದಾರಿ

vinaymk1969

ನವದೆಹಲಿ: ಚೀನಾದ ಲೀ ಎಂಬ 45 ವರ್ಷದ ಮಹಿಳೆಯೊಬ್ಬರು ಫ್ಲೈಟ್​ ಡಿಲೇ ಇನ್ಶೂರೆನ್ಸ್ ವ್ಯವಸ್ಥೆಯ ಇತಿಮಿತಿಗಳ ಲಾಭ ಪಡೆದು, 3.2 ಕೋಟಿ ರೂ.ಗಳಿಸಿದ್ದಾಳೆ.

ಈ ಮಹಿಳೆ 2015-2019ರ ಅವಧಿಯಲ್ಲಿ ವಿಳಂಬವಾಗಿ ಟೇಕಾಫ್, ಲ್ಯಾಂಡ್ ಆಗುವ ನೂರಾರು ವಿಮಾನಗಳ ಟಿಕೆಟ್ ಬುಕ್ ಮಾಡಿದ್ದಳು. ಸ್ಥಳೀಯ ವಾತಾವರಣದ ಮುನ್ಸೂಚನೆಯನ್ನು ಗಮನಿಸಿಕೊಂಡು ಯಾವ ವಿಮಾನಗಳ ಪ್ರಯಾಣ ರದ್ದು ಅಥವಾ ವಿಳಂಬ ಆಗುವ ಸಾಧ್ಯತೆಗಳಿವೆ ಎಂಬುದನ್ನು ಅಂದಾಜಿಸಿ 900ಕ್ಕೂ ಹೆಚ್ಚು ವಿಮಾನಗಳ ಟಿಕೆಟ್​ಗಳನ್ನು ಬೇರೆ ಬೇರೆ ಹೆಸರುಗಳಲ್ಲಿ ಬುಕ್ ಮಾಡಿದ್ದಳು.

ಫ್ಲೈಟ್ ಡಿಲೇ ಇನ್ಶೂರೆನ್ಸ್ ಹಣವನ್ನು ಪಡೆಯುವ ಉದ್ದೇಶದಿಂದಲೇ ಇವೆಲ್ಲ ಟಿಕೆಟ್​ಗಳು ಬುಕ್ ಮಾಡಲ್ಪಟ್ಟಿದ್ದವು. ಸದ್ಯ ಲೀ ಪೊಲೀಸರ ವಶದಲ್ಲಿದ್ದಾಳೆ.