ನ್ಯೂಸ್

ಬನ್ನೂರು ಪ್ರೌಢಶಾಲೆಯಲ್ಲಿ ಧ್ವಜಾರೋಹಣ

ಲಲಾಟಾಕ್ಷ ಎಸ್

ಬನ್ನೂರು: ಪಟ್ಟಣದ ಸಂತೇಮಾಳದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಶುಕ್ರವಾರ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.


ಧ್ವಜಾರೋಹಣ ನೆರವೇರಿಸಿ ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ಭಾರತದ ಸಂವಿಧಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ. ಸ್ವಾತಂತ್ರ್ಯ ನಂತರ ಪಾಳೇಗಾರರು, ವಿವಿಧ ಸಂಸ್ಥಾನಗಳು, ರಾಜರ ಆಳ್ವಿಕೆಗೆ ಹಂಚಿಹೋಗಿದ್ದ ಪ್ರದೇಶಗಳು ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳಿಗೆ ಅನುಗುಣವಾಗಿ ಮರುವಿಂಗಡಣೆಯಾಯಿತು ಎಂದರು.


ಉಪಪ್ರಾಂಶುಪಾಲೆ ಭಟ್ಟಮ್ಮ ಗಣರಾಜ್ಯೋತ್ಸವ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳ ಪಥಸಂಚಲನ ಗಮನ ಸೆಳೆಯಿತು. ರಮೇಶ್, ಕೃಷ್ಣೇಗೌಡ, ಸುರೇಶ್, ಚಲುವರಾಜು, ವಿಜಯಕುಮಾರ್, ಸಿದ್ದಯ್ಯ, ರಾಮಸ್ವಾಮಿ, ರಾಜು, ನಾಗರಾಜು, ಭಾಗ್ಯಮ್ಮ, ಆಶಾ, ಅಶೋಕ್, ಸಾಯಿದಾ ಬಾನು, ಕುಮಾರ್, ಮಹೇಂದ್ರಕುಮಾರ್, ರವೀಶ್ ಇದ್ದರು.