9:37 AM: 2019 -20 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಸಾಲ ಮನ್ನಾ ಯೋಜನೆ ಅಡಿ 21 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ.
9:35 AM: ಬರ ತಡೆಯಲು ಜಲಾನಯನ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ.
9: 32 AM: ಅರಣ್ಯ ಇಲಾಖೆ 2.87 ಕೋಟಿ ಸಸಿ ನೆಡುವ ಮೂಲಕ ಅರಣ್ಯ ಪ್ರದೇಶವನ್ನು 41 ಸಾವಿರ 325 ಹೆಕ್ಟೇರ್ಗೆ ಹೆಚ್ಚಿಸಲಾಗಿದೆ.
9:30 AM: ಅರಣ್ಯ ವರದಿ ಪ್ರಕಾರ, ಅರಣ್ಯ ಪ್ರದೇಶ ಹೆಚ್ಚಿಸಿರುವ ರಾಜ್ಯಗಳಲ್ಲಿ ಕರ್ನಾಟಕ ಪ್ರಥಮ ಸ್ಥಾನ ಪಡೆದಿದೆ.
9: 27 AM: ನೆರೆಯಿಂದ ಹಾನಿಗೊಳಗಾದ ಮನೆಗಳಿಗೆ 50 ಸಾವಿರ ರೂ. ನೀಡಲಾಗಿದೆ.
9:24 AM: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ. ಪೊಲೀಸ್ ವ್ಯವಸ್ಥೆ ಸುಸಜ್ಜಿತವಾಗಿದ್ದು ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲಾಗಿದೆ. ಉತ್ತಮ ಆಡಳಿತದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ.
9:18 AM: ಪರಿಸರ ಸಂರಕ್ಷಣೆಗೆ ರಾಜ್ಯ ಸರ್ಕಾರ ಉತ್ತಮ ಯೋಜನೆ ರೂಪಿಸಿದೆ. ಪರಿಸರ ರಕ್ಷಣೆಗೆ ಜನರು ಸರ್ಕಾರದ ಜತೆ ಕೈಜೋಡಿಸಬೇಕು.
9:14 AM : ರಾಜ್ಯದ ಜನರ ಉದ್ದೇಶಿಸಿ ರಾಜ್ಯಪಾಲರ ಭಾಷಣ. ರಾಜ್ಯದ ಜನರಿಗೆ ಶುಭಕೋರಿದ ರಾಜ್ಯಪಾಲರು.
9:10 AM: ರಾಜ್ಯಪಾಲರಿಂದ ಧ್ವಜಾರೋಹಣ
9: 05 AM :ರಾಜ್ಯಪಾಲರಿಂದ ಧ್ವಜವಂದನೆ ಸ್ವೀಕಾರ
9: 03 AM : ರಾಜ್ಯಪಾಲ ವಜುಬಾಯಿ ವಾಲಾ ಮಾಣಿಕ್ ಷಾ ಪರೇಡ್ ಗ್ರೌಂಡ್ಗೆ ಆಗಮನ.