ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಗಳ ನೌಕರರ ಕ್ಷೇಮಾಭಿವೃದ್ಧಿ ಸಂದ ಸದಸ್ಯರು, ಕೋಮುಲ್​ ಆಡಳಿತಾಧಿಕಾರಿ ಡಾ.ಮೈತ್ರಿ ಎಚ್​.ಪಿ.ಎಸ್​ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. 
ನ್ಯೂಸ್

ಒಕ್ಕೂಟದಿಂದಾಗುತ್ತಿರುವ ಸಮಸ್ಯೆ ಸರಿಪಡಿಸಿ

ಕಿರುವಾರ ಎಸ್.ಸುದರ್ಶನ್

ಕೋಲಾರ: ಜಿಲ್ಲಾ ಹಾಲು ಸಹಾಕಾರ ಸಂಗಳ ಒಕ್ಕೂಟ (ಕೋಮುಲ್​)ದಿಂದ ಹಾಲು ಉತ್ಪಾದಕರ ಸಹಕಾರ ಸಂಗಳಿಗೆ ಮತ್ತು ಉತ್ಪಾದಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ, ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂದ ಸದಸ್ಯರು, ಕೋಮುಲ್​ ಆಡಳಿತಾಧಿಕಾರಿ ಡಾ.ಮೈತ್ರಿ ಎಚ್​.ಪಿ.ಎಸ್​ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ವಿಟಪ್ನಹಳ್ಳಿ ವೆಂಕಟೇಶ್​ ಮಾತನಾಡಿ, ಪ್ರತಿ ವರ್ಷ ಸಂಕ್ರಾಂತಿ ಅಥವಾ ಬೇಸಿಗೆ ಆರಂಭದಲ್ಲಿ ಉತ್ಪಾದಕರಿಂದ ಖರೀದಿಸುವ ಹಾಲಿನ ಪ್ರತಿ ಲೀ. ಮೇಲೆ 3 ರಿಂದ 5 ರೂ. ಏರಿಕೆ ಮಾಡಲಾಗುತ್ತಿತ್ತು, ಆದರೆ ಒಕ್ಕೂಟವು ನಷ್ಟದಲ್ಲಿದೆ ಎಂದು ಹೈನೋದ್ಯಮ ರ್ನಿಲಸಲಾಗುತ್ತಿದೆ. ಅಧಿಕಾರಿಗಳು ನೆಪ ಹೇಳುವುದು ಬಿಟ್ಟು ಬೆಲೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದಿಂದ ಸಂಗಳಿಗೆ ಹಾಲಿನ ವಾರದ ಬಟವಾಡೆ 7 ದಿನಗಳಿಗೊಮ್ಮೆ ಸಂಗಳಿಗೆ ನೀಡಲಾಗುತ್ತಿತ್ತು. ಇದೀಗ ಒಕ್ಕೂವು ಮೂರು ವರ್ಷಗಳ ಬಿಲ್ಲುಗಳನ್ನು ಉಳಿಸಿಕೊಂಡಿದೆ. ಇದರಿಂದಾಗಿ ಸಂಗಳಿಗೆ ಹಾಲು ಉತ್ಪಾದಕರಿಗೆ ಬಟವಾಡೆ ಮಾಡಲು ಸಹ ತೊಂದರೆಯಾಗುತ್ತಿದೆ. ಯಾವ ಮಾನದಂಡ ಆಧಾರದ ಮೇರೆಗೆ ಇಲ್ಲು ಬಿಲ್​ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಈಗಾಗಲೇ ಬೇಸಿಗೆ ಪ್ರಾರಂಭವಾಗುತ್ತಿದ್ದು, ಹಾಲಿನ ಗುಣಮಟ್ಟವನ್ನು ಒಕ್ಕೂಟದಲ್ಲಿ ಕಡಿತಗೊಳಿಸಿ ಸಂಗಳಿಗೆ ಮತ್ತು ಉತ್ಪಾದಕರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದ್ದು, ಹಿಂದೆ ನಿಗದಿಪಡಿಸಿದಂತೆ 0.5 ಗುಣಮಟ್ಟದ ವ್ಯತ್ಯಾಸ ಪರಿಗಣಿಸಿ, ರೈತರಿಗೆ ಉಂಟಾಗುತತಿರುವ ನಷ್ಟ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಹೈನು ರಾಸುಗಳ ವಿಮೆ ಮೊತ್ತವನ್ನು ಸುಮಾರು 6 ತಿಂಗಳಾದರೂ ಸಹ ರೈತರಿಗೆ ನೀಡದೇ ಇರುವುದು ಶೋಚನೀಯ. ರಾಸುಗಳಿಗೆ ವಿಮೆ ಮಾಡಿದ ಕೇವಲ 15 ದಿನಗಳೊಳಗೆ ವಿಮಾ ಮೊತ್ತ ಸಂದ ಹಾಲಿನ ಬಿಲ್ಲಿನಲ್ಲಿ ಕಟಾವು ಮಾಡಿಕೊಳ್ಳಲಾಗಿರುತ್ತದೆ. ಆದರೆ ಮರಣ ಹೊಂದಿದ ರಾಸುಗಳ ವಿಮಾ ಮೊತ್ತವನ್ನು ಸಕಾಲಕ್ಕೆ ಬಿಡುಗಡೆ ಮಾಡಲು ಏನು ಸಮಸ್ಯೆ ಎಂದು ಕಿಡಿಕಾರಿದರು.

ಸಂಘದ ಪದಾಧಿಕಾರಿಗಳಾದ ಚಿನ್ನಹಳ್ಳಿ ಗೋಪಾಲ್​, ಮಿಂಡಹಳ್ಳಿ ಮುನಿರಾಜು, ಬಗಲಹಳ್ಳಿ ನಾಗೇಶಗೌಡ, ವಕ್ಕಲೇರಿ ನಾಗರಾಜು, ಎಸ್​.ಎಂ.ಗೋಪಾಲ್​, ಮದನಹಳ್ಳಿ ರಮೇಶ್​, ತೊಂಡಾಲ ಮಂಜುನಾಥ್​, ಸಿ.ತಿಮ್ಮೇಗೌಡ, ಗಂಗಾಪುರ ಬಾಬು ಇದ್ದರು.