ನ್ಯೂಸ್

ಪಂಚವಾರ್ಷಿಕ ಯೋಜನೆಯಾದ 545 ಎಸ್‌ಐ ನೇಮಕಾತಿ!

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿಗೆ ಗ್ರಹಣ ಬಿಟ್ಟಂತೆ ಕಾಣುತ್ತಿಲ್ಲ.

ಅಂತಿಮ ಲಿತಾಂಶ ಪ್ರಕಟವಾಗಿ 2 ತಿಂಗಳು ಕಳೆದರೂ ನೇಮಕಾತಿ ಆದೇಶ ಪ್ರತಿ ನೀಡಲು ಪೊಲೀಸ್ ಇಲಾಖೆ ಮೀನಮೇಷ ಏಣಿಸಲಾಗುತ್ತಿದೆ. ಖಾಕಿ ಧರಿಸಲು ಐದು ವರ್ಷದಿಂದ ಶ್ರಮ ವಹಿಸಿರುವ ಅಭ್ಯರ್ಥಿಗಳು ಮಾನಸಿಕವಾಗಿ ಕುಗ್ಗುವಂತಾಗಿದೆ.

ಐದು ವರ್ಷದಿಂದ ಒಂದಿಲ್ಲೊಂದು ಕಾರಣಕ್ಕೆ ತಡೆಯಾಗಿದ್ದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಲಿತಾಂಶವನ್ನು ಅ.21ರಂದು ಪ್ರಕಟ ಮಾಡಲಾಯಿತು. 371ಜೆ ಮೀಸಲಾತಿ ಕುರಿತ ರಿಟ್ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿ ಇರುವ ಕಾರಣ 40 ಅಭ್ಯರ್ಥಿಗಳ ಲಿತಾಂಶ ತಡೆ ಹಿಡಿದು ಉಳಿದವರ ಲಿತಾಂಶ ಪೊಲೀಸ್ ನೇಮಕಾತಿ ವಿಭಾಗ ಪ್ರಕಟಿಸಿತು. ಇದಾದ ಮೇಲೆ ಬಹುತೇಕ ಅಭ್ಯರ್ಥಿಗಳ ಸಿಂಧುತ್ವ ಸಹ ಮುಗಿದಿದೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಹ ಸಿಂಧುತ್ವ ಬಾಕಿಇರುವ ಅಭ್ಯರ್ಥಿಗಳ ಪ್ರಮಾಣ ಪತ್ರಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ನೇಮಕಾತಿ ಪ್ರತಿ ಕೊಟ್ಟು ತರಬೇತಿಗೆ ಕಳುಹಿಸುವುದಾಗಿ ಭರವಸೆ ನೀಡಿದ್ದರು. ಇಲ್ಲಿಯವರೆಗೂ ಲಭಿಸಿಲ್ಲ. ಹೊಸ ವರ್ಷ ಆರಂಭಕ್ಕೂ ಮುನ್ನವೇ ನೇಮಕಾತಿ ಪತ್ರ ಕೈ ಸೇರುತ್ತಾ ಎಂದು ಅಭ್ಯರ್ಥಿಗಳು ಕಾಯುತ್ತಿದ್ದಾರೆ.

2020ರಲ್ಲಿ ಎಸ್‌ಐ 545 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 2021ರ ಅ.3ಕ್ಕೆ ಲಿಖಿತ ಪರೀಕ್ಷೆ ನಡೆದು 2022ರ ಜ.19ರಂದು ಫಲಿತಾಂಶ ಪ್ರಕಟಿಸಲಾಗಿತ್ತು. ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಅಧಿಸೂಚನೆ ರದ್ದುಪಡಿಸಿತ್ತು.

ಕೆಲ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಮರು ಪರೀಕ್ಷೆ ಮಾಡುವುದು ಸೂಕ್ತ ಎಂದು 2023ರ ನ.19ರಂದು ತೀರ್ಪು ನೀಡಿತ್ತು. ಹೈಕೋರ್ಟ್ ಮತ್ತು ಸರ್ಕಾರದ ಸೂಚನೆ ಮೇರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ೆಬ್ರವರಿಯಲ್ಲಿ ಮರು ಪರೀಕ್ಷೆ ನಡೆಸಿ ಅಂಕ ಪಟ್ಟಿಯನ್ನು ಮಾರ್ಚ್ 1ರಂದು ಸಿದ್ಧಗೊಳಿಸಿ ಪೊಲೀಸ್ ನೇಮಕಾತಿ ವಿಭಾಗಕ್ಕೆ ಒಪ್ಪಿಸಿದ್ದರು.

371ಜೆ ಹೈದರಾಬಾದ್ ಕರ್ನಾಟಕ ಮೀಸಲಾತಿ ಗೊಂದಲ ಉಂಟಾಗಿತ್ತು. ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ವಿಚಾರಣೆ ನಡೆಯುತ್ತಿದೆ. ಕೊನೆಗೆ ಗೃಹ ಇಲಾಖೆ ಮತ್ತು ಡಿಪಿಎಆರ್ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಒಮ್ಮತದ ಮೇಲೆ 40 ಅಭ್ಯರ್ಥಿಗಳ ಹೊರಗಿಟ್ಟು ಲಿತಾಂಶ ಪ್ರಕಟಿಸಿದರು. ಈಗಾಗಲೇ ಆಯ್ಕೆಯಾದ ಶೇ.80 ವಿದ್ಯಾರ್ಥಿಗಳ ವೈದ್ಯಕೀಯ ಪರೀಕ್ಷೆ ಮತ್ತು ಸಿಂಧುತ್ವ ಮುಗಿದಿದೆ. ಆದರೂ ನೇಮಕಾತಿ ಪತ್ರ ನೀಡಲು ಪೊಲೀಸ್ ಇಲಾಖೆ ವಿಲವಾಗಿದೆ. ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ಯಾವ ಕಾರಣಕ್ಕಾಗಿ ಎಂಬುದು ಗೊಂದಲ ಉಂಟಾಗಿದೆ.

ಎಸ್‌ಐಗಳು ಇಲ್ಲದೆ ಖಾಲಿ ಖಾಲಿ

ರಾಜ್ಯದಲ್ಲಿ ಸಬ್‌ಇನ್‌ಸ್ಪೆಕ್ಟರ್‌ಗಳ ನೇಮಕಾತಿ ನಡೆದು ಐದು ವರ್ಷವಾದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗಳಲ್ಲಿ ಪಿಎಸ್‌ಐಗಳ ಕೊರತೆ ಕಾಡುತ್ತಿದೆ. ಎಎಸ್‌ಐಗಳಿಗೆ ಅನಿವಾರ್ಯವಾಗಿ ಎಸ್‌ಐಗೆ ಬಡ್ತಿ ನೀಡಿದರೂ ಅವರಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ. ಅದರಲ್ಲಿಯೂ ಎಎಸ್‌ಐಗಳು ನಿವೃತ್ತಿ ಅಂಚಿನಲ್ಲಿ ಇರುವ ಹಿನ್ನೆಲೆಯಲ್ಲಿ ಎಸ್‌ಐಗೆ ಬಡ್ತಿ ನೀಡಿದರು ಕೆಲವೇ ತಿಂಗಳಲ್ಲಿ ನಿವೃತ್ತಿ ಆಗುತ್ತಿದ್ದು, ಪೊಲೀಸ್ ಠಾಣೆಗಳು ಖಾಲಿ ಖಾಲಿಯಾಗಿವೆ.

ಉಳಿದ ನೇಮಕಕ್ಕೂ ವಿಳಂಬ

ಉಳಿದ 402 ಎಸ್‌ಐ ನೇಮಕದ ಮೇಲೂ ಪರಿಣಾಮ ಬೀರಿದೆ. 545 ಎಸ್‌ಐ ಹುದ್ದೆಗಳ ನೇಮಕಾತಿ ಪೂರ್ಣವಾಗದ ಕಾರಣ 402 ಹುದ್ದೆಗಳ ಲಿತಾಂಶ ಬಿಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಈಗಾಗಲೇ ೋಷಣೆ ಮಾಡಿರುವ 600ಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೂ ತೊಡಕಾಗಿದೆ.