ಕಲಬುರಗಿ: ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ನೇಮಕ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಶೋಧನಾ ಸಮಿತಿ ಐವರು ಪ್ರಾಧ್ಯಾಪಕರ ಹೆಸರು ಅಂತಿಮಗೊಳಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸಿದೆ. ಹೈದರಾಬಾದ್ ವಿವಿ ಪ್ರಾಧ್ಯಾಪಕಿ ಪ್ರೊ.ಮೀನಾ ಹರಿಹರನ್, ಕಲಬುರಗಿ ಸಿಯುಕೆ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ.ಪುಷ್ಪಾ ಸವದತ್ತಿ, ಹೈದರಾಬಾದ್ ಉಸ್ಮಾನಿಯಾ ವಿವಿ ಪ್ರಾಧ್ಯಾಪಕ ಪ್ರೊ.ಸತ್ಯನಾರಾಯಣ, ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಪ್ರೊ.ನಿರಂಜನ ವಾನಳ್ಳಿ, ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ.ಬಸವರಾಜ ಗಾದಗೆ ಹೆಸರನ್ನು ಶೋಧನಾ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಐದು ವರ್ಷಗಳ ಸೇವಾವಧಿ ಮುಗಿದಿದ್ದರೂ ವಿಸ್ತರಣೆ ಮಾಡಲಾಗಿದೆ. ಆದರೆ ಪ್ರೊ.ಮಹೇಶ್ವರಯ್ಯ ನ.14ಕ್ಕೆ 70 ವರ್ಷ ಪೂರೈಸುತ್ತಿದ್ದು, ನಂತರ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಹೀಗಾಗಿ ಹೊಸ ಕುಲಪತಿಯನ್ನು ಈ ಅವಧಿಯೊಳಗೆ ನೇಮಿಸಲೇಬೇಕಿದೆ. cheap essay writing reddit ಒತ್ತಡಕ್ಕೆ ಮಣೆ: ಆಂಧ್ರಪ್ರದೇಶದ 2 ಕೇಂದ್ರೀಯ ವಿವಿಗಳಿಗೆ ಕರ್ನಾಟಕದವರನ್ನು ನೇಮಿಸಿದ್ದು, ಈಗ ಕರ್ನಾಟಕದಲ್ಲಿ ನಮಗೆ ಅವಕಾಶ ಕೊಡಿ ಎಂದು ಆಂಧ್ರದವರು ಒತ್ತಡ ಹೇರುತ್ತಿದ್ದರು. ಹೀಗಾಗಿ ಆಂಧ್ರದ ಇಬ್ಬರು ಪ್ರಾಧ್ಯಾಪಕರ ಹೆಸರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೊಸ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ಶೋಧನಾ ಸಮಿತಿ ಸಭೆ ಸೇರಿ ಐವರು ಪ್ರಾಧ್ಯಾಪಕರ ಹೆಸರು ಅಂತಿಮ ಗೊಳಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆ ಇದೆ. | ಪ್ರೊ.ಎಚ್.ಎಂ.ಮಹೇಶ್ವರಯ್ಯ, ಸಿಯುಕೆ ಕುಲಪತಿ
15 ಜನ ಶಾರ್ಟ್ಲಿಸ್ಟ್: ಕುಲಪತಿ ಹುದ್ದೆಗೆ ಕಲ್ಯಾಣ ಕರ್ನಾಟಕದ ಇಬ್ಬರು ಸೇರಿ ಸುಮಾರು 349 ಪ್ರಾಧ್ಯಾಪಕರು ಅರ್ಜಿ ಹಾಕಿದ್ದರು. ಈ ಎಲ್ಲರ ಅರ್ಜಿಗಳನ್ನು ಪರಿಷ್ಕರಿಸಿ ಶೋಧನಾ ಸಮಿತಿ 15 ಜನರ ಹೆಸರು ಶಾರ್ಟ್ಲಿಸ್ಟ್ ಮಾಡಿತ್ತು. ಇತ್ತೀಚೆಗೆ ಸಭೆ ಸೇರಿದ ಸಿಯುಕೆ ಕುಲಪತಿ ನೇತೃತ್ವದ ಎಕ್ಸಿಕ್ಯೂಟಿವ್ ಕೌನ್ಸಿಲ್ ಶಿಫಾರಸಿನ ಮೂವರು, ಯುಜಿಸಿಯಿಂದ ಒಬ್ಬರು, ಕೇಂದ್ರ ಎಂಎಚ್ಆರ್ಡಿಯಿಂದ ಒಬ್ಬರು ಸೇರಿ ಐವರ ಸಮಿತಿ ಪ್ರಕ್ರಿಯೆ ಅಂತಿಮಗೊಳಿಸಿದೆ.