ದಾವಣಗೆರೆ: ಮನೆಗೆ ಬೆಂಕಿ ಬಿದ್ದು 5 ಲಕ್ಷ ರೂಪಾಯಿ ನಗದು ಸುಟ್ಟು ಕರಕಲಾದ ಘಟನೆ ಇಲ್ಲಿನ ಭಾರತ್ ಕಾಲನಿಯಲ್ಲಿ ನಡೆದಿದೆ.
ಧರ್ಮಾ ನಾಯ್ಕ್ ಎಂಬುವರ ಮನೆಗೆ ಬೆಂಕಿ ಬಿದ್ದು ಮನೆಯ ವಸ್ತುಗಳೆಲ್ಲ ಆಹುತಿಯಾಗಿವೆ. ಅಲ್ಲದೆ, ನಗರದೇವತೆ ದುರ್ಗಾಂಬಿಕಾ ಜಾತ್ರೆ ಹಿನ್ನೆಲೆಯಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ವಿತರಿಸಲು ಬ್ಯಾಂಕ್ನಿಂದ ತಂದಿಟ್ಟುಕೊಂಡಿದ್ದ 5 ಲಕ್ಷ ರೂಪಾಯಿ ನಗದು ಕೂಡ ಬೆಂಕಿಗೆ ಆಹುತಿಯಾಗಿ ಸುಟ್ಟುಕರಕಲಾಗಿದೆ. ಚಿನ್ನದ ಸರವೂ ಕೂಡ ಬೆಂಕಿಯಿಂದ ಹಾಳಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)