ನ್ಯೂಸ್

ಅಪಘಾತ ಕೇರಳದ ಐದು ಮಂದಿಗೆ ಗಾಯ

ರಾಮನಗರ: ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ . ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಡಿಕ್ಕಿ, ಸರ್ವೀಸ್ ರಸ್ತೆಗೆ ಉರುಳಿ ಕೇರಳ ಮೂಲದ ಐದು ಮಂದಿ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಚನ್ನಪಟ್ಟಣ ತಾಲೂಕಿನ ಚೋಳಮಾರನಹಳ್ಳಿ ಗ್ರಾಮದ ಬಳಿ ನಡೆದಿದೆ. 

ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಹೋಡೈಂ ಕಾರು ವೇಗವಾಗಿ ಬಂದ ಹಿನ್ನೆಲೆ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯೊಡೆದು ಪಕ್ಕದ ಸರ್ವೀಸ್  ರಸ್ತೆಗೆ ಉರುಳಿಬಿದ್ದದೆ. 

 ಅಪಘಾತದಲ್ಲಿ ಕೇರಳ ಮೂಲದ ಕುಟುಂಬಕ್ಕೆ ಸಣ್ಣಪುಟ್ಟ ಗಾಯ. ಇಬ್ಬರು ಮಕ್ಕಳು ಸೇರಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇದೇ ದಾರಿಯಲ್ಲಿ ಸಾಗುತ್ತಿದ್ದ ಮಾಜಿ ಶಾಸಕ ಎಂ. ಕೆ ಸೋಮಶೇಕರ್  ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. 

 . ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.