ಬೆಂಗಳೂರು: ಶಾಸಕಾಂಗ, ಕಾರ್ಯಾಂಗದ ಕಾರ್ಯಚಟುವಟಿಕೆಗಳು, ಅಧಿಕೃತ ಸಮಾರಂಭಗಳಿಗೆ ಸೀಮಿತವಾಗಿದ್ದ ವಿಧಾನಸೌಧ ಆವರಣ ಮೊದಲ ಬಾರಿಗೆ ಪುಸ್ತಕಗಳ ಆರಾಧನೆಗೆ ತಾಣವಾಗಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಭರದಿಂದ ಸಾಗಿವೆ.
ಕರ್ನಾಟಕವೂ ಸೇರಿ ದೇಶ-ವಿದೇಶದ ಹೆಸರಾಂತ ಸಾಹಿತಿಗಳು, ಚಿಂತಕರು, ಉದಯೋನ್ಮುಖ ಬರಹಗಾರರು, ಪ್ರಮುಖ ಪ್ರಕಾಶನಗಳು ಪ್ರಕಟಿಸಿದ ಪುಸ್ತಗಳ ಪ್ರದರ್ಶನ ಮತ್ತು ಮಾರಾಟದ ಮೇಳ ನಡೆಯಲಿದೆ.
ೆ.27ರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ೆ.3ರವರೆಗೆ ಈ ಮೇಳ ಆಯೋಜಿಸಲಾಗಿದೆ. ಆದರೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ೆ.28 ರಿಂದ ಮಾ.2ರವರೆಗೆ ಮಾತ್ರ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ.
ವಿವಿಧ ವಿಚಾರಗಳು, ತತ್ವ-ಸಿದ್ಧಾಂತಗಳು, ವಿಭಿನ್ನ ಆಲೋಚನೆ, ಆವಿಷ್ಕಾರಗಳು, ಹಿರಿಯ, ಹೊಸ ತಲೆಮಾರಿನ ಸಾಹಿತಿಗಳ ಎಲ್ಲ ಜತೆಗೆ ಎಲ್ಲ ಪ್ರಕಾರದ ಸಾಹಿತ್ಯಕ ಕೃತಿಗಳ ಉತ್ಸವದ ರೀತಿಯಲ್ಲಿ ಈ ಮೇಳ ನಡೆಯಲಿದೆ.
ವಿಧಾನಸೌಧದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ರೀದ್ ಮಾಹಿತಿ ಹಂಚಿಕೊಂಡರು. ಉದ್ಘಾಟನಾ ಸಮಾರಂಭಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕದ ಡಾ.ಚಂದ್ರಶೇಖರ ಕಂಬಾರ, ಗೋವಾದ ದಾಮೋದರ ಮೌಜೋ ಭಾಗವಹಿಸಲಿದ್ದಾರೆ.
ಸಮಾರೋಪ ಕಾರ್ಯಕ್ರಮ ಮಾ.2ರಂದು ನಡೆಯಲಿದೆ. ಪೂರ್ವನಿಗದಿತ ಕಾರ್ಯಕ್ರಮಕ್ಕೆ ರಾಜ್ಯಪಾಲರು ತೆರಳಿರುವ ಕಾರಣ ಅಂದು ಲಭ್ಯವಿಲ್ಲ. ಹೀಗಾಗಿ ಮರು ದಿನ ಜಂಟಿ ಅಧಿವೇಶನದ ಉದ್ದೇಶಿಸಿ ಭಾಷಣ ಮಾಡಿದ ನಂತರ ಪುಸ್ತಕ ಮೇಳವನ್ನು ತೋರಿಸುತ್ತೇವೆ ಎಂದು ತಿಳಿಸಿದರು.
ಈ ಮೇಳಕ್ಕೆ 214ಕ್ಕೂ ಹೆಚ್ಚು ಮಳಿಗೆಗಳಿಗೆ ಬೇಡಿಕೆ ಬಂದಿದ್ದವು. ಆದರೆ 150 ಮಳಿಗೆಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಆಸಕ್ತರು ರಿಯಾಯಿತಿ ದರದಲ್ಲಿ ಪುಸ್ತಕ ಖರೀದಿಗೆ ಅವಕಾಶ ಕಲ್ಪಿಸಲು ಕೂಡ ಪ್ರದರ್ಶಕರು, ಪ್ರಕಾಶಕರು ಒಪ್ಪಿಕೊಂಡಿದ್ದಾರೆ.
ಮೇಳ ನಡೆಯುವ ನಾಲ್ಕು ದಿನವೂ ಪ್ರತಿದಿನ ಸಂಜೆ ಸಾಂಸ್ಕೃತಿಕ ನಡೆಯಲಿದ್ದರೆ, ೆ.28ರಿಂದ ಮಾ.2ರವರೆಗೆ ಸಂವಾದ ಗೋಷ್ಠಿ ಏರ್ಪಡಿಸಲಾಗಿದೆ. ಒಟ್ಟು 15 ವಿಷಯಗಳನ್ನು ಸಂವಾದಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಬೆಳಗ್ಗೆ ಹಾಗೂ ಮಧ್ಯಾಹ್ನ ತಲಾ ಎರಡರಂತೆ ನಾಲ್ಕು ಸಂವಾದ ಗೋಷ್ಠಿಗಳು ನಡೆಯಲಿದ್ದು, ಹೊಸ ಲೇಖಕರಿಗೆ ತಮ್ಮ ಪುಸ್ತಕಗಳ ಬಿಡುಗಡೆ ವೇದಿಕೆ ಒದಗಿಸಲಿದ್ದು, ಮಾರಾಟಕ್ಕೆ ಮಳಿಗೆಯೊಂದನ್ನು ಮೀಸಲಿರಿಸಲು ನಿರ್ಧರಿಸಲಾಗಿದೆ ಎಂದು ಯು.ಟಿ.ಖಾದರ್ ವಿವರಿಸಿದರು.
ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಇದ್ದರು.