ನವದೆಹಲಿ: ದೇಶದ ಅರ್ಥ ವ್ಯವಸ್ಥೆಯ ಸ್ವರೂಪ ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ಬದಲಾವಣೆಗಳಾಗುತ್ತಿವೆ. ಈ ನಡುವೆ, ನವೆಂಬರ್ನಲ್ಲಿ ದೀಪಾವಳಿ, ಇತರೆ ಹಬ್ಬಗಳ ಕಾರಣ ರಜೆ ಹೆಚ್ಚಿರುವ ಕಾರಣ ಬ್ಯಾಂಕಿಂಗ್ ವಹಿವಾಟಿನ ಮೇಲೆ ನೇರ ಪರಿಣಾಮವೂ ಬೀರಲಿದೆ. ವಾಟ್ಸ್ಆ್ಯಪ್ ತಂತ್ರಾಂಶ ಬಳಕೆದಾರರು ಕೂಡ ದೊಡ್ಡ ಬದಲಾವಣೆ ಎದುರಿಸಲು ಸಿದ್ಧರಾಗಬೇಕಾಗಿದೆ. ಹೀಗೆ ಇಂದಿನಿಂದ 5 ಬದಲಾವಣೆಗಳನ್ನು ನಿರೀೆ ಮಾಡುತ್ತಿದ್ದಾರೆ. ಅವುಗಳ ಸಂಪ್ತ ವಿವರ ಇಲ್ಲಿದೆ.
ಪಿಂಚಣಿದಾರರಿಗೆ ರಿಲ್ೀ: ಎಸ್ಬಿಐ ಪಿಂಚಣಿದಾರರಿಗೆ ಅನುಕೂಲವಾಗುವಂತಹ ಹೊಸ ಸೇವೆಯನ್ನು ಇಂದಿನಿಂದ ಆರಂಭಿಸುತ್ತಿದೆ. ಇದರಂತೆ, ಪಿಂಚಣಿದಾರರು ಅವರ ಲೈರ್ ಸರ್ಟಿಫಿಕೇಟ್ ಸಲ್ಲಿಸುವುದಕ್ಕೆ ಬ್ಯಾಂಕ್ನ ಶಾಖೆಗೆ ಭೇಟಿ ನೀಡಬೇಕಾಗಿಲ್ಲ. ವಿಡಿಯೋ ಕರೆಯ ಮೂಲಕ ಕೂಡ ಇದನ್ನು ಮಾಡಬಹುದಾಗಿದೆ.
ಹೂಡಿಕೆದಾರರಿಗೆ ಶುಭಸುದ್ದಿ: ಷೇರುಪೇಟೆಯಲ್ಲಿ ಹೂಡಿಕೆದಾರರನ್ನು ಪಾಲಿಬಜಾರ್, ಪೇಟಿಎಂ ಮುಂತಾದ ಕಂಪನಿಗಳ ಐಪಿಒಗಳು ಸೆಳೆಯುತ್ತಿವೆ. "ಢಚಚ' ಕಂಪನಿಯ ಐಪಿಒ ಮೇಲೆ ಹೂಡಿಕೆಗೆ ಇಂದೇ ಕೊನೆ ದಿನ. ಪಾಲಿಸಿ ಬಜಾರ್ ಐಪಿಒ ಹೂಡಿಕೆ ಇಂದೇ ಶುರು. ಇದೇ ರೀತಿ ಪೇಟಿಎಂ ಕಂಪನಿ ಐಪಿಒ ನ.8ರಿಂದ ಹೂಡಿಕೆಗೆ ತೆರೆದುಕೊಳ್ಳುತ್ತಿದೆ.
ವಿಶೇಷ ರೈಲು ಸೇವೆ: ದೀಪಾವಳಿ ಮತ್ತು ಇತರೆ ಹಬ್ಬಗಳ ಪ್ರಯುಕ್ತ ಭಾರತೀಯ ರೈಲ್ವೆ ನವೆಂಬರ್ನಲ್ಲಿ ಹಲವು ವಿಶೇಷ ರೈಲು ಸೇವೆಯನ್ನು ಇಂದಿನಿಂದ ಆರಂಭಿಸುತ್ತಿದೆ. ತಿಂಗಳು ಪೂರ್ತಿ ಈ ವಿಶೇಷ ರೈಲು ಸಂಚಾರ ಇರಲಿದೆ. ಅಕ್ಟೋಬರ್ 25ರಂದು ದಣ ರೈಲ್ವೆ ಕೂಡ ವಿಶೇಷ ರೈಲು ಸಂಚಾರದ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.
ವಾಟ್ಸ್ಆ್ಯಪ್ ಸೇವೆ ಎಲ್ಲರಿಗೂ ಇಲ್ಲ: ಅಪ್ಡೇಟ್ ಆದ ಆಪರೇಟಿಂಗ್ ಸಿಸ್ಟಂಗೆ ಹೊಂದಿಕೊಳ್ಳದ, ಅದರ ನಿಯಮಗಳನ್ನು ಒಪ್ಪಿಕೊಳ್ಳದ ಬಳಕೆದಾರರಿಗೆ ಇಂದಿನಿಂದ ವಾಟ್ಸ್ಆ್ಯಪ್ ಬಳಕೆ ಬಹುತೇಕ ಕಷ್ಟ ಸಾಧ್ಯ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಬಳಸುವವರಿಗೆ ಅನ್ವಯವಾಗಿರಲಿದ್ದು, ಅದಕ್ಕೂ ಮೊದಲೆ ತಂತ್ರಾಂಶ ಅಪ್ಡೇಟ್ ಮಾಡುವಂತೆ ನೋಟಿಫಿಕೇಶನ್ ಅನ್ನು ಅದು ಕಳುಹಿಸುತ್ತಿದೆ.
ಎಲ್ಪಿಜಿ ಬೆಲೆ ಏರಿಕೆ ಸಾಧ್ಯತೆ
ಎಲ್ಪಿಜಿ ಅಡುಗೆ ಅನಿಲ ದರ ನವೆಂಬರ್ 1ರಿಂದ ಏರಿಕೆಯಾಗಲಿದೆ. ನೈಸರ್ಗಿಕ ಅನಿಲ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಏರಿಕೆ ಆಗಿದೆ. ಈಗಾಗಲೇ ನಾಲ್ಕು ಬಾರಿ ದರ ಏರಿಕೆಯಾಗಿದ್ದು, ದೆಹಲಿಯಲ್ಲಿ 900 ರೂಪಾಯಿ ಅಂಚಿನಲ್ಲಿದೆ. ಇದು ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.