ಬೆಂಗಳೂರು: ಕೇಂದ್ರ ಗೃಹ ಸಚಿವಾಲಯ ಸಹಯೋಗದಲ್ಲಿ ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ (ಎನ್‌ಸಿಆರ್‌ಬಿ)ವಾರ್ಷಿಕ ಪ್ರಶಸ್ತಿಗಳು ರಾಜ್ಯ ಪೊಲೀಸ್ ಇಲಾಖೆಗೆ ಐದು ಪುರಸ್ಕಾರಗಳು ಲಭಿಸಿವೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಕ್ರೈಂ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಆ್ಯಂದ್ ಸಿಸ್ಟಮ್(ಸಿಸಿಟಿಎನ್‌ಎಸ್) ಮತ್ತು ಇಂಟರ್ ಅಪೀರಬಲ್ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ (ಐಸಿಜೆಎಸ್) ಯೋಜನೆಗಳನ್ನು ಅನುಷ್ಠಾನದಲ್ಲಿ ಉತ್ತಮ ಕೊಡುಗೆ ನೀಡಿದ ರಾಜ್ಯ ಮತ್ತು ಅಧಿಕಾರಿ, ಸಿಬ್ಬಂದಿಗೆ 2018ರಿಂದ ಪ್ರತಿ ವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ 5ನೇ ಸಮಾವೇಶದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಗಣಕೀಕರಣ ಕ್ಷೇತ್ರದಲ್ಲಿ (ಸಿಸಿಟಿಎನ್‌ಎಸ್,ಐಸಿಜೆಎಸ್,ಇಡಿಎಆರ್,ಎಂಸಿಸಿಟಿಎನ್) ನೀಡದ ಸೇವೆ ಗುರುತಿಸಿ 5 ಪ್ರಶಸ್ತಿಗಳನ್ನು ಕೇಂದ್ರ ಗೃಹ ಸಚಿವಾಲಯ ಮತ್ತು ಎನ್‌ಸಿಆರ್‌ಬಿ ವಿಭಾಗ ಗೌರವಿಸಿದೆ.
ಇಂಟರ್ ಅಪರೇಬಲ್ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ ಯೋಜನೆಯಡಿ ಪೊಲೀಸ್, ನ್ಯಾಯಾಂಗ, ಬಂಧಿಖಾನೆ, ಅಭಿಯೋಗ ಮತ್ತು ನ್ಯಾಯ ವಿಜ್ಞಾನ ಪ್ರಯೋಗಾಲಯಗಳೊಂದಿಗೆ ಅಪರಾಧ ಮತ್ತು ಅಪರಾಧಿಗಳ ಮಾಹಿತಿಯನ್ನು ಡಿಜಿಟಲ್‌ನಲ್ಲಿ ವಿನಿಮಯ ಮಾಡಿಕೊಳ್ಳಲು ಮತ್ತು ತ್ವರಿತವಾಗಿ ಪ್ರಕರಣಗಳ ವಿಲೇವಾರಿಗೆ ಸಹಕಾರಿ ಆಗುವ ವ್ಯವಸ್ಥೆಯನ್ನು ರಾಜ್ಯಪೊಲೀಸ್ ಇಲಾಖೆ ವ್ಯವಸ್ಥೆಯಲ್ಲಿ ಸೃಜಿಸಿದೆ. ಈ ಸೇವೆಯನ್ನು ಗುರುತಿಸಿ 3ನೇ ಬಹುಮಾನವನ್ನು ನೀಡಿ ಪ್ರಶಂಸಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಪೊಲೀಸ್ ಗಣಕ ವಿಭಾಗ) ಡಾ. ಪ್ರಣವ್ ಮೊಹಾಂತಿಗೆ ಗುಡ್ ಪ್ರಾಕ್ಟೀಸಸ್ ಇನ್ ನೆಟ್‌ವರ್ಕಿಕಿಂಗ್ ಆ್ಯಂಡ್ ಸೈಬರ್ ಸೆಕ್ಯೂರಿಟಿ ಪ್ರಸೆಟೇಷನ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಸಿಸಿಟಿಎನ್‌ಎಸ್ ಮತ್ತು ಐಸಿಜೆಎಸ್ ವಿಭಾಗದಲ್ಲಿ ರಾಜ್ಯ ಅಪರಾಧ ದಾಖಲಾತಿ ವಿಭಾಗದಲ್ಲಿ (ಎಸ್‌ಸಿಆರ್‌ಬಿ) ಉತ್ತಮ ಸೇವೆ ಸಲ್ಲಿಸಿದ ಎಸ್‌ಸಿಆರ್‌ಬಿ ಸಬ್‌ಇನ್‌ಸ್ಪೆಕ್ಟರ್ ಚೇತನ್ ಕುಮಾರ್, ಎಎಸ್‌ಐ ದಿನೇಶ್‌ಬಾಬು ಮತ್ತು ಎಎಸ್‌ಐ ಮುನಿರಾಜು ಎಂಬುವರಿಗೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.