ಮೈಸೂರಿನ ಪ್ರಮತಿ ಶಿಕ್ಷಣ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ್ದ ಕ್ರಿಕೆಟ್ ಟೂರ್ನ್‌ಮೆಂಟ್‌ನಲ್ಲಿ ಟ್ರೋಫಿ ಗೆದ್ದ ಬೆಟ್ಟದಪುರ ಎಸ್‌ಂಎಸ್ ವಿದ್ಯಾಸಂಸ್ಥೆಯ ಉಪನ್ಯಾಸಕರು ಮತ್ತು ಶಿಕ್ಷಕರನ್ನು ಆಡಳಿತ ಮಂಡಳಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಮಂಜುನಾಥ್, ಎಸ್.ಕೆ.ರಾಜ, ವೆಂಕಟೇಶ್, ಕುಮಾರ್, ಶಿವಕುಮಾರ್, ಸತೀಶ್, ಅನಿಲ್ ಇತರರು ಇದ್ದರು. 
ನ್ಯೂಸ್

ಎಸ್‌ಎಂಎಸ್ ವಿದ್ಯಾಸಂಸ್ಥೆಗೆ ಪ್ರಥಮ ಬಹುಮಾನ

ಎಂ.ರವಿ

ಬೆಟ್ಟದಪುರ: ಬೆಟ್ಟದಪುರ ಎಸ್‌ಎಂಎಸ್ ವಿದ್ಯಾಸಂಸ್ಥೆಯ ಕಾಲೇಜಿನ ಉಪನ್ಯಾಸಕರು ಹಾಗೂ ಶಿಕ್ಷಕರು ಇತ್ತೀಚೆಗೆ ಮೈಸೂರಿನ ಪ್ರಮತಿ ಶಿಕ್ಷಣ ಸಂಸ್ಥೆ ವತಿಯಿಂದ ಬೋಧಕ ಮತ್ತು ಬೋಧಕೇತರ ವೃಂದದವರಿಗೆ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪ್ರಥಮ ಬಹುಮಾನವನ್ನು ಪಡೆಯುವ ಮೂಲಕ ಟ್ರೋಫಿಯನ್ನು ಮುಡಿಗೆರಿಕೊಂಡಿದ್ದಾರೆ.

ಬೋಧಕ ವೃಂದದವರ ಈ ಸಾಧನೆಗೆ ಮಂಗಳವಾರ ವಿದ್ಯಾಸಂಸ್ಥೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಬಿ.ವಿ ಮಂಜುನಾಥ್, ಪ್ರಾಂಶುಪಾಲ ರಾಜ ಎಸ್.ಕೆ, ಮುಖ್ಯಶಿಕ್ಷಕರಾದ ವೆಂಕಟೇಶ್, ಕುಮಾರ್, ಶಿಕ್ಷಕರಾದ ಶಿವಕುಮಾರ್, ಸತೀಶ್, ಅನಿಲ್, ಪ್ರತಾಪ್, ಬಸವರಾಜ್, ಕುಬೇರ್, ವಸಂತ್, ತಮ್ಮೇಗೌಡ, ಹರ್ಷಿತಾ, ಸೋಮಶೇಖರ್, ಸತೀಶ್, ಅಂದಾನಯ್ಯ ಇದ್ದರು.