ನ್ಯೂಸ್

90ರ ದಶಕದ ಸೂಪರ್ ಮಾಡೆಲ್; ಮೊದಲ ಮಿಸೆಸ್ ವರ್ಲ್ಡ್ ಪಟ್ಟ ಗೆದ್ದ ಈ ನಟಿ ಧರ್ಮ ಬದಲಿಸಿದ್ದು ಯಾಕೆ ಗೊತ್ತಾ? | Mrs World

ಮುಂಬೈ: 90ರ ದಶಕದಲ್ಲಿ ತನ್ನ ಸುಂದರ ನೋಟದಿಂದ ಬಹಳಷ್ಟು ಜನರ ಹೃದಯವನ್ನು ಗೆದ್ದಿದ್ದ ನಟಿ ಅದಿತಿ ಗೋವಿತ್ರಿಕರ್ ಮೊದಲ ಮಿಸೆಸ್ ವರ್ಲ್ಡ್ ಪಟ್ಟವನ್ನು ಮುಡಿಗೇರಿಸಿಕೊಂಡವರು. ತನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ ಇವರು ವೈಯಕ್ತಿಕ ಜೀವನದಲ್ಲಿ ಅನೇಕ ಏರಿಳಿತಳನ್ನು ನೋಡಿದ್ದಾರೆ. 2001ರಲ್ಲಿ ಅವರು ಮಿಸೆಸ್ ವರ್ಲ್ಡ್(Mrs World) ಪ್ರಶಸ್ತಿಯನ್ನು ಗೆದ್ದ ಮೊದಲಿಗರು.

ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ಜನಿಸಿದ ಅದಿತಿ ಗೋವಿತ್ರಿಕರ್ ಎಂಬಿಬಿಎಸ್ ಪದವಿ ಪಡೆದರು. ಬ್ಯೂಟಿ ವಿತ್ ಬ್ರೈನ್' ಖ್ಯಾತಿಯ ಅದಿತಿ ಗೋವಿತ್ರಿಕರ್ ಅವರು 'ಕಭಿ ತೋ ನಜರ್ ಮಿಲಾವ್' ಹಾಡಿನ ಮೂಲಕ ಹೆಸರುವಾಸಿಯಾಗಿದ್ದಾರೆ. 1997ರಲ್ಲಿ ಅದಿತಿ ತನ್ನ ಕಾಲೇಜಿನಿಂದ ಪದವಿ ಪಡೆದರು. ತನ್ನ ಅಧ್ಯಯನವನ್ನು ಮುಗಿಸಿದ ನಂತರ ಮಾಡೆಲಿಂಗ್ ಜಗತ್ತಿಗೆ ಪ್ರವೇಶಿಸಿದ ಅದಿತಿ ಗೋವಿತ್ರಿಕರ್ ಆ ಕಾಲದ ಸೂಪರ್ ಮಾಡೆಲ್ ಎಂದು ಗುರುತಿಸಲ್ಪಟ್ಟರು.

ಕಾಲೇಜಿನಲ್ಲೇ ಮುಫಜಲ್​ ಲಕ್ಡಾವಾಲಾ ಎಂಬುವವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಕನಿಷ್ಠ ಆರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ. ಪದವಿ ಮುಗಿದ ಬಳಿಕ ಮದುವೆಯಾಗಲು ನಿರ್ಧರಿಸಿದರು. ಆದರೆ ಬೇರೆ ಬೇರೆ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ನಟಿಯ ಪಾಲಕರು ಮದುವೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ ತಂದೆ-ತಾಯಿಯ ಆಸೆಗೆ ವಿರುದ್ಧವಾಗಿ ತಾನು ಪ್ರೀತಿಸಿದ ಮುಫಜಲ್​ ಲಕ್ಡಾವಾಲಾ ಅವರನ್ನು ಅದಿತಿ ಮದುವೆಯಾದರು.

ಅದಿತಿ ಮತ್ತು ಮುಫಜಲ್ 1998ರಲ್ಲಿ ನಾಗರಿಕ ಮತ್ತು ಮುಸ್ಲಿಂ ಕಾನೂನಿನ ಅಡಿಯಲ್ಲಿ ವಿವಾಹವಾದರು. ಮದುವೆಯ ನಂತರ ಅದಿತಿ ಗೋವಿತ್ರಿಕರ್ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ಸಾರಾ ಲಕ್ಡಾವಾಲಾ ಎಂದು ಬದಲಾಯಿಸಿಕೊಂಡರು. ಅನೇಕ ವರ್ಷಗಳ ಕಾಲ ಸಂತೋಷವಾಗಿ ದಾಂಪತ್ಯ ಜೀವನ ನಡೆಸಿದ ಅವರಿಗೆ ಇಬ್ಬರು ಮಕ್ಕಳು. ಮಗಳು ಮತ್ತ ಮಗ, ಮಗನ ಜನನದ ನಂತರ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತು.

ಆ ಸಮಯದಲ್ಲಿ ಇಬ್ಬರ ನಡುವೆ ಹಲವು ಬಾರಿ ಜಗಳಗಳು ನಡೆದಿದ್ದು ಇದೇ ಕಾರಣದಕ್ಕೆ ಬೇರ್ಪಟ್ಟರು. ಬಳಿಕ ಮುಫಜ್ಜಲ್ ಆಸ್ಟ್ರೇಲಿಯಾಕ್ಕೆ ಹೋದರು ಮತ್ತು ನಟಿ ಮಕ್ಕಳೊಂದಿಗೆ ತನ್ನ ಹೆತ್ತವರ ಮನೆಗೆ ಹಿಂದಿರುಗಿದ್ದಾಗಿ ಆ ಸಮಯದಲ್ಲಿ ವರದಿಯಾಗಿತ್ತು. ಅದಿತಿ ಗೋವಿತ್ರಿಕರ್ ಮತ್ತು ಮುಫಜಲ್ ಲಕ್ಡಾವಾಲಾ 2008ರಲ್ಲಿ ಬೇರ್ಪಟ್ಟರು ಎಂದು ಮೂಲಗಳು ತಿಳಿಸಿವೆ. 2001ರಲ್ಲಿ ಅವರು ಮಿಸೆಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದರು. ಈ ಪ್ರಶಸ್ತಿ ಗೆದ್ದ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದರು.

ಆದರೆ ಸಂದರ್ಶನವೊಂದರಲ್ಲಿ ಸ್ವತಃ ನಟಿ ಅದಿತಿಯೇ ಈ ಕುರಿತು ಮಾತನಾಡಿದ್ದಾರೆ. ನನ್ನ ಜೀವನದ ಕೆಟ್ಟ ಕ್ಷಣವೆಂದರೆ ನನ್ನ ಮದುವೆಯನ್ನು ಉಳಿಸಲು ಸಾಧ್ಯವಾಗಲಿಲ್ಲ. ನಾನು ಗೆಲ್ಲಲು ಇಷ್ಟಪಡುತ್ತೇನೆ. ನನಗೆ ಬಾಲ್ಯದಿಂದಲೂ ಗೆಲ್ಲಬೇಕೆಂಬ ಆಸೆ ಇತ್ತು. ಕ್ಲಾಸಿನಲ್ಲಿ ಫಸ್ಟ್ ಬರಬೇಕು ಅಂತ ಆಸೆ ಇತ್ತು. ಅಂತಹ ಪರಿಸ್ಥಿತಿಯಲ್ಲಿ ವೈವಾಹಿಕ ಸಂಬಂಧವು ಮುರಿದುಹೋಗಿದ್ದು ನನಗೆ ಸಹಿಸಲು ಕಷ್ಟವಾಯಿತು,. ಇದು ಹೇಗೆ ಸಂಭವಿಸಿತು ಎಂದು ಯೋಚಿಸಿದ್ದೇನೆ ಎಂದು ಹೇಳಿದರು.(ಏಜೆನ್ಸೀಸ್​​)