ನ್ಯೂಸ್

'ಸ್ಮೃತಿ ಇರಾನಿ' ಅಭಿನಯದ 'ತುಳಸಿ' ಪಾತ್ರದ ಫಸ್ಟ್ ಲುಕ್ ವೈರಲ್ | smriti-irani

smriti-irani:  ನಟಿ ಹಾಗೂ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ 'ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಸೀಸನ್ -2 ಧಾರವಾಹಿಯ ತುಳಸಿ ಪಾತ್ರದ ಫಸ್ಟ್ ಲುಕ್ ಪೋಸ್ಟರ್​ ಇಂಟರ್ನೆಟ್​ನಲ್ಲಿ ಸಂಚಲನ ಸೃಷ್ಠಿಸಿದೆ. ಬಹು ಸಮಯದ ಬಳಿಕ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಲು ಸ್ಮೃತಿ ಇರಾನಿ ಇರಾನಿ ರೆಡಿಯಾಗಿದ್ದಾರೆ.

2000 ನೇ ಇಸವಿಯಲ್ಲಿ ಪ್ರಸಾರವಾದ ಮತ್ತು 2008 ರವರೆಗೆ ಸುಮಾರು ಎಂಟು ವರ್ಷಗಳ ಕಾಲ ಯಶಸ್ವಿಯಾಗಿ ನಡೆದ 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಎಂಬ ಧಾರವಾಹಿಯಲ್ಲಿ ಸ್ಮೃತಿ ಇರಾನಿ ಪಾತ್ರ ನಿರ್ವಹಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಧಾರವಾಹಿ 7 ವರ್ಷಗಳ ಕಾಲ ನಿರಂತರವಾಗಿ ನಂಬರ್​ ಒನ್​ ಸ್ಥಾನದಲ್ಲಿತ್ತು. 2008ರ ನವೆಂಬರ್‌ನಲ್ಲಿ ಈ ಧಾರಾವಾಹಿ ಮಗಿದಿತ್ತು.

(ಏಜೆನ್ಸೀಸ್)

ಏಕ್ತಾ ಕಪೂರ್ ತನ್ನ ಬ್ಯಾನ‌ರ್ ಅಡಿಯಲ್ಲಿ ಈ ಧಾರಾವಾಹಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಸ್ಮೃತಿ ಇರಾನಿ ಪಾತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಸಾಂಪ್ರದಾಯಿಕ ಗೃಹಿಣಿಯ ಲುಕ್‌ನಲ್ಲಿ ಕೆಂಪು ಬಿಂದಿ, ಕಪ್ಪು ಮಣಿಗಳ ಮಂಗಳಸೂತ್ರದಿಂದ ಲೇಯರ್ ಮಾಡಲಾದ ಆಭರಣಗಳಲ್ಲಿ ಅವರು ಮಿಂಚಿದ್ದಾರೆ.

ಇದೀಗ ಸ್ಮೃತಿ ಮತ್ತೆ ಸೀರಿಯಲ್ ಜಗತ್ತಿಗೆ ರೀ ಎಂಟ್ರಿ ಕೊಟ್ಟಿದ್ದಾರೆ. 'ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಸೀಸನ್ -2 ಕಿರುತೆರೆ ಲೋಕದಲ್ಲಿ ನಿರೀಕ್ಷೆ ಹೆಚ್ಚಿಸಿದ್ದು, ಸ್ಮೃತಿ ಇರಾನಿ ಮತ್ತೆ ಟಿವಿ ಲೋಕಕ್ಕೆ ಬರುತ್ತಿದ್ದಂತೆ ಅವರನ್ನು ತುಳಸಿ ವೀರ್ವಾನಿ ಪಾತ್ರದಲ್ಲಿ ನೋಡಲು ವೀಕ್ಷಕರು ಕಾಯುತ್ತಿದ್ದಾರೆ.