ಮೈಸೂರು: ಆಹಾರ ಸರಬರಾಜು ಮಾಡಿದ ಬಿಲ್ ಪಾವತಿಸುವ ಸಂಬಂಧ 30 ಸಾವಿರ ರೂ. ಲಂಚಸ್ವೀಕರಿಸುತ್ತಿದ್ದಾಗ ಪಿರಿಯಾಪಟ್ಟಣ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ನಟೇಶ್ ಎಂಬುವರಿಗೆ ಆಹಾರ ಪೂರೈಕೆ ಮಾಡಿದ ಬಿಲ್ ಪಾವತಿಸಲು 30 ಸಾವಿರ ರೂ.ಲಂಚಕ್ಕೆ ಪ್ರಥಮ ದರ್ಜೆ ಸಹಾಯಕ ವಿಜಯ್ ಕುಮಾರ್ ಬೇಡಿಕೆ ಇಟ್ಟಿದ್ದರು. ವಿಜಯ್ ಕುಮಾರ್ ಗುರುವಾರ ಹಣ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಈ ಕಾರ್ಯಾಚರಣೆಯು ಲೋಕಾಯುಕ್ತ ಎಸ್ಪಿ ಸಜಿತ್ ಮಾರ್ಗ ದರ್ಶನದಲ್ಲಿ ಡಿವೈಎಸ್ಪಿ ವಿ.ಕೃಷ್ಣಯ್ಯ ಹಾಗೂ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ರವಿಕುಮಾರ್, ರೂಪಶ್ರೀ, ಲೋಕೇಶ್ ಹಾಗೂ ಸಿಬ್ಬಂದಿಗಳಾದ ಮೋಹನ್ ಗೌಡ, ವೀರಭದ್ರ ಸ್ವಾಮಿ, ಆಶಾ, ತ್ರಿವೇಣಿ, ಪುಷ್ಪ ಲತಾ, ದಿನೇಶ್, ಲೋಕೇಶ್, ಶೇಖರ್, ಲೋಕೇಶ್ ಭಾಗಿಯಾಗಿದ್ದರು.