Kolkata Hotel: 14 ಜನರು ಸಾವನ್ನಪ್ಪಿದ ಭೀಕರ ಬೆಂಕಿ ಅವಘಡಕ್ಕೆ ಕಾರಣವಾದ ಕೋಲ್ಕತ್ತಾ ಹೋಟೆಲ್‌ನ ಮಾಲೀಕ ಮತ್ತು ಮ್ಯಾನೇಜರ್ನ್ನು ಪೊಲೀಸರು ಗುರುವಾರ(ಮೇ.1) ಬಂಧಿಸಿದ್ದಾರೆ.
ಕೊಲ್ಕತ್ತಾ ಹೋಟೆಲ್ನಲ್ಲಿ ಮಂಗಳವಾರ (ಏ.29) ಸಂಭವಿಸಿದ ಬೆಂಕಿ ಅಪಘಾತದಲ್ಲಿ 14 ಜನರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದರು. ರಿತುರಾಜ್ ಹೋಟೆಲ್ ಮಾಲೀಕ ಆಕಾಶ್ ಚಾವ್ಲಾ ಮತ್ತು ಮ್ಯಾನೇಜರ್ ಗೌರವ್ ಕಪೂರ್ ಅವರನ್ನು ಇಂದು ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಭಯೋತ್ಪಾದಕ ದಾಳಿ; ನ್ಯಾಯಾಂಗ ತನಿಖೆ ಕೋರಿ ಸಲ್ಲಿಸಲಾದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್| Supreme court
ಕೋಲ್ಕತ್ತಾ ಪೊಲೀಸರು ಈ ಇಬ್ಬರ ವಿರುದ್ಧ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿದ್ದಾರೆ. ಹೋಟೆಲ್ನಲ್ಲಿ ಪತ್ತೆಯಾಗಿರುವ 14 ಮೃತದೇಹಗಳಲ್ಲಿ 12 ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು, ಉಳಿದ ಇಬ್ಬರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)