ನ್ಯೂಸ್

ತಂಬಾಕು ಬ್ಯಾರನ್‌ಗೆ ಬೆಂಕಿ

ಭೇರ್ಯ: ಸಾಲಿಗ್ರಾಮದಲ್ಲಿ ಶುಕ್ರವಾರ ತಂಬಾಕು ಬ್ಯಾರನ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ನಷ್ಟವುಂಟಾಗಿದೆ.

ಈ ಬ್ಯಾರನ್ ಬೆಳೆಗಾರ ಎಸ್.ಟಿ.ರಘುರಾಮ್ ಅವರಿಗೆ ಸೇರಿದ್ದಾಗಿದೆ. ನಾಲ್ಕು ಎಕರೆಯಲ್ಲಿ ಇತರ ಬೆಳೆಗಳೊಂದಿಗೆ ಹೊಗೆಸೊಪ್ಪನ್ನು ಪ್ರಮುಖ ಬೆಳೆಯಾಗಿ ಬೆಳೆದಿದ್ದರು. ಸೊಪ್ಪನ್ನು ಹದಗೊಳಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಸೊಪ್ಪು, ಹೆಂಚು, ಪೈಪ್‌ಗಳು ಮತ್ತು ಮರದ ಸಲಕರಣೆಗಳು ಸುಟ್ಟು ಹೋಗಿವೆ.

ರಘುರಾಮ್ ಅವರು ಎಸ್‌ಬಿಐ ಸಾಲಿಗ್ರಾಮ ಶಾಖೆಯಲ್ಲಿ 3 ಲಕ್ಷ ರೂ., ತಂಬಾಕು ಮಂಡಳಿಯಲ್ಲಿ ಗೊಬ್ಬರಕ್ಕಾಗಿ 20 ಸಾವಿರ ರೂ. ಸಾಲ, ಬ್ಯಾರನ್ ನಿರ್ಮಾಣಕ್ಕೆ 50 ಸಾವಿರ ರೂ. ಸಾಲ ಮಾಡಿದ್ದು, ದುರ್ಘಟನೆಯಿಂದ ಕಂಗಾಲಾಗಿದ್ದಾರೆ.