ನ್ಯೂಸ್

ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ; ವದಂತಿಗೆ ಹೆದರಿ ಪ್ರಾಣ ರಕ್ಷಿಸಿಕೊಳ್ಳಲು ಪ್ರಯತ್ನಿಸಿದ 6 ಮಂದಿ ಸಾವು | Pushpak Express

ಮಹಾರಾಷ್ಟ್ರ: ಜಲಗಾಂವ್‌ನ ಪರಂದಾ ರೈಲು ನಿಲ್ದಾಣದಲ್ಲಿ ಭಾರಿ  ಅಪಘಾತ ಸಂಭವಿಸಿದ್ದು 6 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಗುರುವಾರ(ಜ.22) ವರದಿಯಾಗಿದೆ.

ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ(Pushpak Express) ಬೆಂಕಿ ಅಂಟಿಕೊಂಡಿದೆ ಎಂಬ ವದಂತಿಯಿಂದ ಭಯಭೀತಗೊಂಡ ಪ್ರಯಾಣಿಕರು ಚಲಿಸುವ ರೈಲಿನಿಂದ ಏಕಾಏಕಿ ಕೆಳಗೆ ಧುಮಿಕಿದ್ದಾರೆ. ಹೊರಗೆ ಹಾರಿದ ಪ್ರಯಾಣಿಕ ಮೇಲೆ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹರಿದಿದ್ದು, ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಬಳಿಕ ರೈಲಿನಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ವರದಿ ಉಲ್ಲೇಖಿಸಿವೆ.(ಏಜೆನ್ಸೀಸ್​)