ನ್ಯೂಸ್

ಪಿದ್ಮಲೆಯಲ್ಲಿ ಆಕಸ್ಮಿಕ ಬೆಂಕಿ

ಮೂಡುಬಿದಿರೆ: ಕಲ್ಲಮುಂಡ್ಕೂರು ಪಿದ್ಮಲೆ ಗುಡ್ಡಗಾಡು ಪ್ರದೇಶದ ಸುಮಾರು ಐದು ಎಕರೆ ಜಾಗದಲ್ಲಿ ಭಾನುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.

ಇದು ಮೀಸಲು ಅರಣ್ಯವಾಗಿರುವುದರಿಂದ ಕಲ್ಲಮುಂಡ್ಕೂರು ಮತ್ತು ತೆಂಕಮಿಜಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 200 ಎಕರೆ ಯಲ್ಲಿ ಹರಡಿಕೊಂಡಿದೆ.

ಬೆಂಕಿ ಕಾಣಿಸಿಕೊಂಡ ಮಾಹಿತಿ ಅರಣ್ಯ ಇಲಾಖೆಗೂ ಲಭಿಸಿದ್ದು ಡಿಆರ್‌ಎಫ್‌ಒ ಸಹಿತ ಸಿಬಂದಿ, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಊರವರು ಬೆಂಕಿ ನಂದಿಸಿದ್ದಾರೆ.