ನ್ಯೂಸ್

ರೈಲಿನಲ್ಲಿ ಬೆಂಕಿ ಅವಘಡ; ಎಲ್ಲಾ ಪ್ರಯಾಣಿಕರು ಸುರಕ್ಷಿತ! Train

Webdesk - Savina Naik

Train:  ಮಹಾರಾಷ್ಟ್ರದ ಪುಣೆಯಿಂದ ದೌಂಡ್​ಗೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಶಟಲ್ ಡಿಸೇಲ್ ಮಲ್ಟಿಪಲ್ ಯುನಿಟ್  ರೈಲು ಬೆಂಕಿ ಅಪಘಾತಕ್ಕೆ ಒಳಗಾಗಿದೆ. ಬೆಂಕಿಯನ್ನು ತ್ವರಿತವಾಗಿ ನಂದಿಸಲಾಯಿತು ಮತ್ತು ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಟ್ರೈನ್​​ನಲ್ಲಿರುವ ಟಾಯ್ಲೆಟ್​​ನಲ್ಲಿ ನಂತರ ಇಡೀ ಟ್ರೈನ್​ಗೆ ಬೆಂಕಿ ಆವರಿಸುತ್ತಿತ್ತು.  ರೈಲಿನಲ್ಲಿ ದಟ್ಟ ಹೊಗೆಯೊಂದಿಗೆ ಬೆಂಕಿ ಕಾಣಿಸಿಕೊಂಡಿದ್ದು, ಹಲವು  ಪ್ರಯಾಣಿಕರು ಹೊಗೆಯನ್ನು ನೋಡಿ ಗಾಬರಿಯಿಂದ ರಕ್ಷಣೆಗಾಗಿ ಕಿರುಚಾಡಿದ್ದಾರೆ. ರೈಲು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. 30 ನಿಮಿಷದೊಳಗೆ ಅಗ್ನಿಶಾಮಕ ಸಿಬ್ಬಂದಿ ಕೂಡ ಆಗಮಿಸಿ, ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.

ಅಧಿಕಾರಿ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ 55 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಧೂಮಪಾನ ಮಾಡಿದ ನಂತರ ರೈಲಿನ ಕಸದ ಬುಟ್ಟಿಗೆ 'ಬೀಡಿ' ಎಸೆದ ಆರೋಪದ ಮೇಲೆ ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಸದ ಬುಟ್ಟಿಯಲ್ಲಿ ಕಾಗದಗಳು ಮತ್ತು ಇತರ ಕಸವಿದ್ದು, ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಶೌಚಾಲಯದಿಂದ ಹೊಗೆ ಬಂದು ಪ್ರಯಾಣಿಕರಲ್ಲಿ ಭಯಭೀತರಾದರು ಎಂದು  ಹೇಳಿದರು.

ಆ ಬೋಗಿಯಲ್ಲಿ ಕೆಲವೇ ಪ್ರಯಾಣಿಕರಿದ್ದರು. ಬೆಂಕಿಯನ್ನು ಬೇಗನೆ ನಂದಿಸಲಾಯಿತು, ಮತ್ತು ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.