ನ್ಯೂಸ್

ಬೆಳ್ಳಂಬೆಳಗ್ಗೆ ಹೊತ್ತಿ ಉರಿಯಿತು ದೆಹಲಿಯ ಪ್ರಮುಖ ಕಾರ್ಡ್​ಬೋರ್ಡ್​ ಕಾರ್ಖಾನೆ...

ನವದೆಹಲಿ: ಒಂದೆಡೆ ಕರೊನಾ ಸೋಂಕು ಆತಂಕ ಸೃಷ್ಟಿಸಿದ್ದರೆ, ಇನ್ನೊಂದೆಡೆ ಒಂದಲ್ಲ ಒಂದು ದುರಂತ ಸಂಭವಿಸುತ್ತಿದೆ.

ಮೊನ್ನೆ ವಿಶಾಖಪಟ್ಟಣ ರಾಸಾಯನಿಕ ಕಾರ್ಖಾನೆಯಲ್ಲಿ ವಿಷ ಅನಿಲ ಸೋರಿಕೆಯಿಂದ ಸಾವು-ನೋವು ಆಗಿತ್ತು. ಅದಾದ ಬಳಿಕ ಮಹಾರಾಷ್ಟ್ರದಲ್ಲಿ 16 ಜನ ವಲಸೆ ಕಾರ್ಮಿಕರು ಗೂಡ್ಸ್​ ರೈಲಿಗೆ ಬಲಿಯಾದರು.

ಈಗ ದೆಹಲಿಯ ಕಾರ್ಡ್​ಬೋರ್ಡ್​ ಕಾರ್ಖಾನೆಯಲ್ಲಿ ಬೆಂಕಿ ಅವಘಡ ನಡೆದಿದೆ. ಬವಾನಾ ಕೈಗಾರಿಕಾ ಪ್ರದೇಶದಲ್ಲಿ ಇರುವ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ 7.55ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, 14 ಅಗ್ನಿಶಾಮಕದಳಗಳು ಸ್ಥಳಕ್ಕೆ ತೆರಳಿ, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ದೇಶದ 29 ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಬವಾನ ಕೂಡ ಒಂದು. ಯಾವುದೇ ಸಾವು ಆದ ಬಗ್ಗೆ ವರದಿಯಾಗಿಲ್ಲ. ಕಾರ್ಖಾನೆಯಲ್ಲಿದ್ದ ಹಲವು ವಸ್ತುಗಳು ಸುಟ್ಟುಕರಕಲಾಗಿವೆ.
ದರ್ಯಾಗಂಜ್​​​ನಲ್ಲಿರುವ ಬಟ್ಟೆ ಅಂಗಡಿಯಲ್ಲಿ ಗುರುವಾರ ಮುಂಜಾನೆ 3ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತ್ತು. (ಏಜೆನ್ಸೀಸ್​)