ನ್ಯೂಸ್

ಕುಕ್ಕರ್, ಸೀರೆ ಹಂಚಿಕೆ; ಶಾಸಕ ಶಾಮನೂರು ಮೇಲೆ ಎಫ್ಐಆರ್!

Webdesk - Athul Damale

ದಾವಣಗೆರೆ: ರಾಜ್ಯದಲ್ಲಿ ಚುನಾವಣೆ ಕಾವು ರಂಗೇರುತ್ತಿದ್ದು ಅಖಾಡದಲ್ಲಿ ಕುಕ್ಕರ್, ಸೀರೆ, ದೋಸೆ ಅಂಚು ಹರಿದಾಡುತ್ತಿವೆ. ಇವನ್ನು ಕೆಲವು ಜನರು ಖುಷಿಯಲ್ಲಿ ಪಡೆದುಕೊಂಡು ಮನೆಯಲ್ಲಿ ಇಟ್ಟುಕೊಂಡರೆ, ಇನ್ನೂ ಕೆಲವರು ಸೀರೆಗೆ ಬೆಂಕಿ ಹಚ್ಚಿ ಮೂಲಭೂತ ಸೌಲಭ್ಯ ಕೊಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಸೀರೆ ಕುಕ್ಕರ್​ ಹಂಚಿದ ಪ್ರಕರಣದ ಮೇಲೆ ಹಾಲಿ ಶಾಸಕ, ಮಾಜಿ ಸಚಿವರ ಮೇಲೆ ಎಫ್ ಐಆರ್ ಕೂಡ ದಾಖಲಾಗಿದೆ. ಹಾದಿ ಬೀದಿಯಲ್ಲಿ ಕುಕ್ಕರ್, ಸೀರೆ ಹಂಚಿಕೆ, ನಡೆಯುತ್ತಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ವಿರುದ್ಧ ತಮ್ಮ ಹಾಗೂ ಮಗನ ಭಾವಚಿತ್ರ ಇರುವ ಕುಕ್ಕರ್, ದೋಸೆ ಹೆಂಚು ಹಾಗೂ ಸೀರೆಗಳನ್ನು ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ದಾವಣಗೆರೆಯ ಭಗತ್ ಸಿಂಗ್ ನಗರದಲ್ಲಿ ಕುಕ್ಕರ್ ಹಂಚುವಾಗ ರೆಡ್ ಹ್ಯಾಂಡ್ ಆಗಿ ಸ್ವತ್ತನ್ನು ಸೀಜ್ ಮಾಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಶಾಸಕರು 'ನಾವು‌ ಕುಕ್ಕರ್ ಹಂಚಿಲ್ಲ, ನಮ್ಮ ಅಭಿಮಾನಿಗಳು ಹಂಚಿರಬಹುದು ಎಂದು ಜಾರಿಕೊಂಡಿದ್ದಾರೆ. ಆದರೆ ಇತ್ತ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮೇಲೆ A1 ಮತ್ತು ಪುತ್ರ ಹಾಗೂ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ವಿರುದ್ಧ A2 ಎಫ್ ಐಆರ್ ದಾಖಲಿಸಿದ್ದಾರೆ.