ನ್ಯೂಸ್

ಸುಳ್ಳು ಸಂದೇಶದ ವಿರುದ್ಧ ಎಫ್ಐಆರ್

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ವಾಟ್ಸ್‌ಆ್ಯಪ್‌ನಲ್ಲಿ ಒಳ ಮೀಸಲಾತಿ ಕುರಿತು ಮಾಜಿ ಸಚಿವ ಎಚ್.ಅಂಜನೇಯ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಸುಳ್ಳು ಮಾಹಿತಿ ಹರಿಬಿಟ್ಟವರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಕೆಪಿಸಿಸಿ ಸಂಯೋಜಕ ಸತೀಶ್ ಎಂಬಾತ ದೂರು ಸಲ್ಲಿಸಿದ್ದಾರೆ. ವಿಜಯನಗರ ಜಿಲ್ಲೆಯ ಒಳ ಮೀಸಲಾತಿ ಹೋರಾಟ ಸಮಿತಿ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಧರವನ್ನು ಖಂಡಿಸಿ ಮತ್ತು ನಿಂದನಾತ್ಮಕ ಭಾಷೆ ಬಳಸಿ ಎಚ್.ಆಂಜನೇಯ ಮಾತನಾಡಿದ್ದಾರೆ ಎಂದು ಸಂದೇಶವನ್ನು ಗ್ರೂಪ್‌ಗೆ ಸೆಂಡ್ ಮಾಡಿದ್ದಾರೆ.

ಇದರಿಂದ ಸಿಎಂ ಸಿದ್ದರಾಮಯ್ಯ ಮತ್ತು ಅಂಜನೇಯ ಅವರಿಗೆ ಅವಮಾನ ಮಾಡಿದ್ದು,ಜನರಿಗೆ ಗಲಾಟೆಗೆ ಪ್ರಚೋಧನೆ ಮಾಡಿದ್ದಾರೆ. ಇಂತಹ ಸುಳ್ಳು ಸಂದೇಶ ವೈರಲ್ ಮಾಡುವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಇದರ ಮೇರೆಗೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.