ನ್ಯೂಸ್

ಈ ರೈಲ್ವೆ ಹಳಿ ಮೇಲೆ ಕಳೆದುಹೋಗಿರುವ ಏರ್​ಪೋಡ್​ ಹುಡುಕಿಕೊಟ್ಟವರು ನಿಜಕ್ಕೂ ಗ್ರೇಟ್​!

ಬೆಂಗಳೂರು: ಪ್ರಾಣಿಗಳ ಕಣ್ಣು ಮನುಷ್ಯನ ಕಣ್ಣಿಗಿಂತಲೂ ನೋಡುವುದಕ್ಕೆ ವಿಚಿತ್ರ ಹಾಗೂ ವಿಭಿನ್ನವಾಗಿರುತ್ತದೆ. ಬಣ್ಣ ಬಣ್ಣದ ಕಣ್ಣುಗಳನ್ನು ಹೊಂದುವ ಮೂಲಕ ನೋಡುಗರನ್ನು ಆಕರ್ಷಿಸುತ್ತವೆ. ಹೆಚ್ಚಾಗಿ ಹದ್ದಿನ ನಯನಗಳು ಬಹಳ ಚುರುಕು ಮತ್ತು ಸ್ಪಷ್ಟ ಎಂದು ಹೇಳಲಾಗುತ್ತದೆ. ಆದ್ರೆ, ಮಾನವನ ಕಣ್ಣು ಇತರೆ ಜೀವಗಳಿಗಿಂತ ಭಿನ್ನ ಎಂದರೆ ತಪ್ಪಾಗಲಾರದು. ಇಡೀ ಜಗತ್ತನ್ನು ನೋಡುವ ನಮ್ಮ ಕಣ್ಣುಗಳು ಅದನ್ನು ಸ್ಪಷ್ಟವಾಗಿ ಕಂಡು, ಆನಂದಿಸುವ ಪರಿ ಬಹಳ ವಿಶೇಷ. ದೂರದಲ್ಲಿರುವ ವಸ್ತುಗಳು ಅಥವಾ ಕಣ್ಣಿಗೆ ಸವಾಲೆಸೆಯುವ ಅಂಶಗಳನ್ನು ಪತ್ತೆಹಚ್ಚುವುದೇ ಈ ಕಣ್ಣಿಗೊಂದು ಸವಾಲು. ಅಂತಹದ್ದೇ ಒಂದು ಚಿತ್ರ ಇಲ್ಲಿದ್ದು, ಸಹಜವಾಗಿ ಅನೇಕರು ಹಾಡು ಕೇಳಲು ಬಳಸುವ ಏರ್​ಪೋಡ್​ವೊಂದು ರೈಲಿನ ಹಳಿ ಮೇಲೆ ಕಳೆದುಹೋಗಿದೆ. ಇದನ್ನು ಹುಡುಕಿಕೊಟ್ಟರೆ ನಿಜಕ್ಕೂ ನೀವೇ ಗ್ರೇಟ್​.

ಇಲ್ಲೊಂದು ಪೋಸ್ಟ್​ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬರು ತಮ್ಮ ಏರ್​ಪೋಡ್​ ಅನ್ನು ಫೋಟೋದಲ್ಲಿರುವ ರೈಲ್ವೆ ಹಳಿ ಮೇಲೆ ಕಳೆದುಕೊಂಡಿದ್ದಾರೆ. ಇದು ಸಣ್ಣ ವಸ್ತುವಾದ ಕಾರಣ ಎಷ್ಟು ಬಾರಿ ಹುಡುಕಿದರೂ ಸಹ ನಮ್ಮ ಕಣ್ಣಿಗೆ ಕಾಣದೆ ಕಣ್ಣಿಗೊಂದು ಸವಾಲಾಗಿ ಪರಿಣಮಿಸಿದೆ. ಹಾಗಾಗಿಯೇ ಈ ಸವಾಲನ್ನು ನಿಮಗೆ ಹಸ್ತಾಂತರಿಸಿರುವ ನಾವು, ಹೇಗಾದರೂ ಮಾಡಿ ಹಳಿ ಮೇಲೆ ಕಳೆದುಕೊಂಡಿರುವ ಕಪ್ಪು ಬಣ್ಣದ ಏರ್​ಪೋಡ್​ನ ಹುಡುಕಿಕೊಡಿ ಎಂದು ಇಲ್ಲಿ ಕೇಳಿಕೊಂಡಿದ್ದೇವೆ. ನಿಮಗೆ ಸುಳಿವು: ಕಪ್ಪು ಬಣ್ಣದ ವಸ್ತು, ಎರಡು ಕಲ್ಲುಗಳ ಮಧ್ಯೆ ಸಿಲುಕಿಕೊಂಡಿದೆ.

ಈ ವಿಷಯದಲ್ಲಿ ನೆಟ್ಟಿಗರು ಬಹಳ ಚುರುಕಿದ್ದಾರೆ. ಕೆಲವರು ತಮ್ಮ ಕಣ್ಣುಗಳನ್ನು ಕ್ಯಾಮರಾ ಲೆನ್ಸ್​ಗಳಂತೆ ಜೂಮ್​ ಮಾಡಿ ಹುಡುಕಿದ್ದು, 'ನನಗೆ ಬಿಳಿ ಬಣ್ಣದ ಏರ್​ಪೋಡ್​' ಕಾಣಿಸಿತು ಎಂದಿದ್ದಾರೆ. ಮತ್ತೊಬ್ಬರು, 'ನೀವೇಳಿದಂತೆ ನನಗೆ ಏರ್​ಪೋಡ್​ ಕಾಣಿಸಲಿಲ್ಲ. ಆದ್ರೆ, ಹತ್ತಿ, ಚಿಕ್ಕ ಬ್ಯಾಟರಿ ಸಿಕ್ಕಿತು' ಎಂದು ಬರೆದುಕೊಂಡಿದ್ದಾರೆ. ಅಸಲಿಗೆ ಇದು ನಿಜಕ್ಕೂ ಕಷ್ಟಸಾಧ್ಯವೇ. ಒಂದು ಸಣ್ಣ ಏರ್​ಪೋಡ್​ನ ಪತ್ತೆಹಚ್ಚುವುದು ಕಣ್ಣಿಗೆ ಸವಾಲಿನ ವಿಷಯವೇ ಬಿಡಿ. ಫೋಟೋವಿನ ಎಡಭಾಗದಲ್ಲಿ ಕೊಂಚ ಮೇಲೆ ನೋಡಿದ್ರೆ, ಎರಡು ಕಲ್ಲಿನ ಮಧ್ಯೆ ಕಪ್ಪು ಬಣ್ಣದಲ್ಲಿದೆ ಸೂಕ್ಷ್ಮವಾಗಿ ಗಮನಿಸಿ ನೋಡಿ,(ಏಜೆನ್ಸೀಸ್).