ನ್ಯೂಸ್

ಹಣಕಾಸಿನ ನೆರವು ಕುರಿತು ಅರಿವು ಕಾರ್ಯಕ್ರಮ ಜ. 31ರಂದು

Haveri - Kariyappa Aralikatti

ಹಾವೇರಿ: ಕಾಸಿಯಾ ಸಿಡ್ಬಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರದ ಸಹಯೋಗದಲ್ಲಿ ಜ. 31ರಂದು ಬೆಳಗ್ಗೆ 10-30ಕ್ಕೆ ನಗರದ ಹೋಟೆಲ್ ಶಿವ ರೆಸಿಡೆನ್ಸಿಯಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಮತ್ತು ರಫ್ತು ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಜರುಗಲಿದೆ.
ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಉದ್ಘಾಟಿಸುವರು. ಜಿ.ಪಂ. ಸಿಇಒ ಅಕ್ಷಯ ಶ್ರೀಧರ, ಸಿಡ್ಬಿ ಹುಬ್ಬಳ್ಳಿ ಶಾಖಾ ಕಚೇರಿ ವ್ಯವಸ್ಥಾಪಕ ಶಿವಕುಮಾರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವಿನಾಯಕ ಜೋಶಿ, ಬೆಂಗಳೂರು ವಿಟಿಪಿಸಿ ಉಪ ನಿರ್ದೇಶಕ ಮನ್ಸೂರ್ ಮತ್ತಿತರರು ಭಾಗಹಿಸುವರು ಎಂದು ಪ್ರಕಟಣೆ ತಿಳಿಸಿದೆ.