Sonu Nigam: ಇತ್ತೀಚೆಗಷ್ಟೇ ಬೆಂಗಳೂರಿನ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ ನೀಡಿದ್ದ ಹೇಳಿಕೆಯೊಂದು ಭಾರೀ ವಿವಾದಕ್ಕೆ ಗುರಿಯಾಗಿತ್ತು. ಸೋನು ವಿವಾದಾತ್ಮಕ ಹೇಳಿಕೆಗೆ ಕನ್ನಡಿಗರು ತೀವ್ರ ಆಕ್ರೋಶ ಹೊರಹಾಕಿದ್ದರು. ಗಾಯಕನ ದುರಂಹಕರಾದ ಮಾತಿಗೆ ಕನ್ನಡ ಚಿತ್ರರಂಗ ಕೂಡ ಕೆರಳಿ, ಅವರನ್ನು ಸ್ಯಾಂಡಲ್ವುಡ್ನಿಂದ ಬ್ಯಾನ್ ಕೂಡ ಮಾಡಿದೆ. ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಇದೀಗ ಸೋನು ನಿಗಮ್ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ.
ತನ್ನ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆ ತಮ್ಮ ಜಾಲತಾಣ ಖಾತೆ ಮೂಲಕ ಕನ್ನಡಿಗರಲ್ಲಿ ಹೃತ್ಪೂರ್ವಕ ಕ್ಷಮೆ ಕೋರಿದ್ದಾರೆ. ಕ್ಷಮಿಸಿ ಕರ್ನಾಟಕ, ನನ್ನ ಈಗೋ ಮುಂದೆ ನಿಮ್ಮ ಮೇಲಿನ ಪ್ರೀತಿಯೇ ದೊಡ್ಡದು. ಸದಾ ಪ್ರೀತಿಸುತ್ತೇನೆ ಎಂದು ಬರೆದು ಹಂಚಿಕೊಂಡಿದ್ದಾರೆ. ಸೋನು ನಿಗಮ್ ಕ್ಷಮಾಪಣೆ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಕನ್ನಡಿಗರು, ಇಷ್ಟು ದಿನಗಳ ಬಳಿಕ ಕ್ಷಮೆ ಒಪ್ಪುವಂತದ್ದಲ್ಲ ಎಂದರೆ, ಇನ್ನೂ ಕೆಲವರು ಈಗ ಬುದ್ಧಿ ಬಂದಿತೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.