ಬೆಂಗಳೂರು: ನಟಿ ಸ್ಪಂದನಾ ಅಕಾಲಿಕ ಮರಣ ಇಡೀ ಸ್ಯಾಂಡಲ್ವುಡ್ನಲ್ಲೇ ಸೂತಕದ ವಾತಾವರಣ ನಿರ್ಮಿಸಿದ್ದು, ರಾಜಕಾರಣಿಗಳು, ಸಚಿವರು, ಹಿರಿಯ ನಟ ನಟಿಯರು ಸೇರಿದಂತೆ ಅನೇಕ ಗಣ್ಯರು, ಸ್ಪಂದನಾ ಮರಣದ ಕುರಿತಾಗಿ ಸಂತಾಪ ಸೂಚಿಸಿದ್ದಾರೆ.
ಇದೀಗ ಸ್ಪಂದನಾ ಕುಟುಂಬಸ್ಥರು, ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆಯನ್ನು ನೆರವೇರಿಸಲು ನಿರ್ಧರಿಸಿದ್ದು ಹರಿಶ್ಚಂದ್ರ ಘಾಟ್ನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಮಲ್ಲೇಶ್ವರಂನಲ್ಲಿರುವ ಬಿ.ಕೆ ಹರಿಪ್ರಸಾದ್ ಮನೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದು ಸುಮಾರು 4 ಗಂಟೆಗೆ ಸ್ಪಂದನ ಅವರ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.
ಶ್ರೀರಾಂಪುರಂನ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು ಈ ಹಿನ್ನೆಲಯಲ್ಲಿ ಬಿಬಿಎಂಪಿ ಅಧಿಕಾರಿಗಳು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಹದಿನೈದು ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.
ಅದಲ್ಲದೇ ಸಾರ್ವಜನಿಕ ದರ್ಶನದ ಅವಧಿ ಮುಗಿದ ನಂತರ, ಸ್ಪಂದನಾರನ್ನು ಹರಿಶ್ಚಂದ್ರ ಘಾಟ್ಗೆ ಕರೆದೊಯ್ಯಲು ವಿಶೇಷ ವಾಹನ ವ್ಯವಸ್ಥೆ ಮಾಡಲಾಗಿದ್ದು ಮೆರವಣಿಗೆ ನಡೆಯುವಾಗಲೂ ಜನರಿಗೆ ಅಂತಿಮ ದರ್ಶನ ಪಡೆಯುವ ಅವಕಾಶ ಇರುವ ಸಾಧ್ಯತೆ ಇದೆ.