ಕರ್ನಾಟಕ ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಮತ್ತು ವೋಟರ್ ಐಡಿ ಪರಿಶೀಲನೆ 
ನ್ಯೂಸ್

ಕರ್ನಾಟಕ ಮತದಾರರ ಅಂತಿಮ ಪಟ್ಟಿ ಪ್ರಕಟ: ಬರೋಬ್ಬರಿ 1 ಕೋಟಿ ಹೆಸರು ಡಿಲೀಟ್, ನಿಮ್ಮ ಹೆಸರಿದೆಯಾ ಹೀಗೆ ಚೆಕ್ ಮಾಡಿ! | Karnataka Electoral Roll

ಕರ್ನಾಟಕದ ಎಸ್‌ಐಆರ್ ಅಂತಿಮ ಪಟ್ಟಿಯಲ್ಲಿ ಒಟ್ಟು 4,55,00,011 ಮತದಾರು

ಪರಿಷ್ಕರಣೆಯಲ್ಲಿ ಸುಮಾರು 99.32 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ರದ್ದು

ಮತದಾರರು CEO ವೆಬ್‌ಸೈಟ್ ಅಥವಾ ECI ಸರ್ಚ್ ಪೋರ್ಟಲ್​ನಲ್ಲಿ ತಮ್ಮ ಹೆಸರು ಚೆಕ್ ಮಾಡಿ

Voter List Name Delete: ಕರ್ನಾಟಕದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಂತರ ರಾಜ್ಯದಲ್ಲಿ ಒಟ್ಟು 4.55 ಕೋಟಿ ಮತದಾರರು ನೋಂದಾಯಿತರಾಗಿದ್ದಾರೆ. ಪರಿಷ್ಕರಣೆಗೂ ಮುನ್ನ ಇದ್ದ 5.54 ಕೋಟಿ ಮತದಾರರ ಪೈಕಿ ಸುಮಾರು 99.32 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಕರಡು ಪಟ್ಟಿಯಲ್ಲಿ 1.07 ಕೋಟಿಗೂ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿತ್ತು. ಆದರೆ, ಈಗ ಪ್ರಕಟಿಸಲಾದ ಅಂತಿಮ ಪಟ್ಟಿಯಲ್ಲಿ ಕರಡು ಪಟ್ಟಿಗೆ ಹೋಲಿಸಿದರೆ ಹೆಚ್ಚುವರಿಯಾಗಿ 8.64 ಲಕ್ಷ ಮತದಾರರ ಹೆಸರುಗಳನ್ನು ಮತ್ತೆ ಸೇರ್ಪಡೆಗೊಳಿಸಲಾಗಿದೆ.

ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ ಚೆಕ್ ಮಾಡಿ

ಕ್ಷೇತ್ರವಾರು ಮತದಾರರ ಅಂತಿಮ ಪಟ್ಟಿಯು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ (CEO Karnataka) ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದರ ಜೊತೆಗೆ ಭಾರತೀಯ ಚುನಾವಣಾ ಆಯೋಗದ 'ಇಲೆಕ್ಟೋರಲ್ ಸರ್ಚ್' ಪೋರ್ಟಲ್ ಮೂಲಕವೂ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು.

ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡುವುದು ಹೇಗೆ?

1.ಚುನಾವಣಾ ಆಯೋಗದ ಸರ್ಚ್ ಪೋರ್ಟಲ್‌ಗೆ ಭೇಟಿ ನೀಡಿ ‘Search by EPIC’ ಆಯ್ಕೆಯನ್ನು ಆರಿಸಿಕೊಳ್ಳಿ.

2.ನಿಮ್ಮ ಮತದಾರರ ಗುರುತಿನ ಚೀಟಿ (Voter ID) ಸಂಖ್ಯೆಯನ್ನು ನಮೂದಿಸಿ.

3.ರಾಜ್ಯಗಳ ಪಟ್ಟಿಯಲ್ಲಿ 'Karnataka' ಆಯ್ಕೆ ಮಾಡಿ, ಕ್ಯಾಪ್ಚಾ (Captcha) ಕೋಡ್ ನಮೂದಿಸಿ 'Search' ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: ಲವರ್​ ಜತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ: ಪ್ರೇಮಿಯ ಕಾಲು ಕಟ್ಟಿ, ರಸ್ತೆಯಲ್ಲೇ ಬೆಲ್ಟ್‌ನಿಂದ ಧರ್ಮದೇಟು | Wife Caught With Boyfriend

ಒಂದು ವೇಳೆ ಪೋರ್ಟಲ್‌ನಲ್ಲಿ ‘No Result Found’ ಎಂದು ಬಂದಲ್ಲಿ, ನಿಮ್ಮ ಹೆಸರು ಡಿಲೀಟ್ ಆಗಿದೆ ಎಂದು ತೀರ್ಮಾನಿಸುವ ಮುನ್ನ ಅಧಿಕೃತ ಮತದಾರರ ಪಟ್ಟಿಯೊಂದಿಗೆ ಪರಿಶೀಲಿಸಿ ಅಥವಾ ಸಂಬಂಧಪಟ್ಟ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ. (ಏಜೆನ್ಸೀಸ್​)