ನ್ಯೂಸ್

ಪಾರ್ನ್​ ಸ್ಟಾರ್​ ಆದಳು ಪ್ರಸಿದ್ಧ ನಿರ್ದೇಶಕನ ಮಗಳು: ಪ್ರತಿ ದಿನ ಕೆಲಸ ಮಾಡುವುದಿಷ್ಟವಿಲ್ಲ, ನನ್ನ ಕೆಲಸ ಜನರಿಗೆ ತೃಪ್ತಿ ನೀಡುವಂತಿಬೇಕು!

ವಾಷಿಂಗ್ಟನ್​: ಹಾಲಿವುಡ್​ನ ಪ್ರಸಿದ್ಧ ನಿರ್ದೇಶಕ ಮತ್ತು ನಿರ್ಮಾಪಕರಾಗಿರುವ ಸ್ಟೀವನ್​ ಸ್ಪೀಲ್ಬರ್ಗ್​ ಅವರ 23 ವರ್ಷದ ಮಗಳು ಮೈಕೆಲಾ ತಾನು ನೀಲಿ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.

ಮೈಕೆಲಾಗೆ ಪ್ರತಿನಿತ್ಯ ಆಫೀಸ್​ಗೆ ಹೋಗಿ ದುಡಿಯುವುದ ಇಷ್ಟವಿಲ್ಲವಂತೆ. ಹಾಗೆಯೇ ನಾನು ಮಾಡುವ ಕೆಲಸದಿಂದ ಯಾರಾದರೂ ತೃಪ್ತಿಯಾಗಬೇಕು ಎನ್ನುವುದು ಆಕೆಯ ಇಷ್ಟವಂತೆ. ಆ ಕಾರಣದಿಂದಾಗಿ ತಾನು ಒಬ್ಬಂಟಿ ನೀಲಿ ಚಿತ್ರಗಳನ್ನು ಚಿತ್ರಿಸುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ.

"ನನ್ನ ದೇಹ, ನನ್ನ ಜೀವನ, ನನ್ನ ಗಳಿಕೆ ಹಾಗೆಯೇ ಇದು ನನ್ನ ಆಯ್ಕೆ. ಇದು ಸಕಾರಾತ್ಮಕ ಮತ್ತು ಸಶಕ್ತ ಆಯ್ಕೆ. ಈ ಉದ್ಯಮದಲ್ಲಿ ಮೋಹ ಹೊಂದಿ, ಸುರಕ್ಷಿತ, ವಿವೇಕಯುತ ಕೆಲಸವನ್ನು ಮಾಡುವುದರಲ್ಲಿ ಯಾವುದೇ ಅವಮಾನವಿಲ್ಲ ಎನ್ನುವುದನ್ನು ನಾನು ಅರಿತುಕೊಂಡಿದ್ದೇನೆ." ಎಂದು ಆಕೆ ತನ್ನ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಾನು ಈ ಕೆಲಸವನ್ನು ಮಾಡುತ್ತಿರುವುದರ ಕುರಿತಾಗಿ ಇತ್ತೀಚೆಗೆ ತನ್ನ ತಂದೆ ತಾಯಿಗೆ ಫೇಸ್​ಟೈಮ್​ ಆ್ಯಪ್​ನಲ್ಲಿ ವಿಡಿಯೋ ಕಾಲ್​ ಮಾಡಿ ತಿಳಿಸಿರುವುದಾಗಿ ಅವರು ತಿಳಿಸಿದ್ದಾರೆ.

ಸ್ವಂತ ಮಕ್ಕಳಿಲ್ಲದ ಸ್ಟೀವನ್​ ಸ್ಪೀಲ್ಬರ್ಗ್​ ದಂಪತಿ ಮೈಕೆಲಾರನ್ನು ಚಿಕ್ಕ ವಯಸ್ಸಿನಲ್ಲಿ ದತ್ತು ಪಡೆದಿದ್ದರು. (ಏಜೆನ್ಸೀಸ್​)