ನ್ಯೂಸ್

ಚಲನಚಿತ್ರ ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ ಇನ್ನಿಲ್ಲ

ಬೆಂಗಳೂರು: ಚಲನಚಿತ್ರ ನಿರ್ದೇಶಕ, ನಟ ಬೂದಾಳ್ ಕೃಷ್ಣಮೂರ್ತಿ ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ.

ಚಿತ್ರದುರ್ಗದಲ್ಲಿ 1949ರಲ್ಲಿ ಜನಿಸಿದ ಬೂದಾಳ್ ಕೃಷ್ಣಮೂರ್ತಿ, 1973ರಲ್ಲಿ ಸಿದ್ದಲಿಂಗಯ್ಯನವರ 'ಬೂತಯ್ಯನ ಮಗ ಅಯ್ಯು' ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. 'ಎರಡು ದಂಡೆಯ ಮೇಲೆ', 'ಒಲವಿನ ಕಾಣಿಕೆ', 'ಸೀತಾಂಜನೇಯ', 'ಶುಭಲಗ್ನ', 'ಲಂಚ ಸಾಮ್ರಾಜ್ಯ' ಸೇರಿದಂತೆ ಮುಂತಾದ ಚಿತ್ರಗಳನ್ನು ಬೂದಾಳ್ ನಿರ್ದೇಶಿಸಿದ್ದರು.

'ಪ್ರೊಫೆಸರ್', 'ಶ್ರೀಗಂಧ', 'ಅರಿಶಿನ ಕುಂಕುಮ', 'ಬಲ್ ನನ್ಮಗ', 'ಪ್ರಜಾಶಕ್ತಿ', 'ನಿರ್ಣಯ', 'ಆರ್ಯಭಟ' ಮುಂತಾದ ಚಿತ್ರಗಳಲ್ಲಿ ಬೂದಾಳ್ ಕೃಷ್ಣಮೂರ್ತಿ ಅಭಿನಯಿಸಿದ್ದರು.

ಕೆಲ ದಿನಗಳಿಂದ ಆನಾರೋಗ್ಯಕ್ಕೀಡಾಗಿದ್ದ ಬೂದಾಳ್ ಕೃಷ್ಣಮೂರ್ತಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಕೆಂಗೇರಿಯ ಶಿರ್ಕಿ ಅಪಾರ್ಟ್​ಮೆಂಟಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು.