ನ್ಯೂಸ್

ತುಮಕೂರು ವಿವಿ ಕ್ಯಾಂಪಸ್​ನಲ್ಲಿ ಫಿಲ್ಮ ಇನ್ಸಿಟಿಟ್ಯೂಟ್​

ತುಮಕೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತುಮಕೂರು ವಿವಿ ವಿಜ್ಞಾನ ವಿಭಾಗದ ಎಲ್ಲಾ ತರಗತಿಗಳು ಹೊಸ ಕ್ಯಾಂಪಸ್​ "ಜ್ಞಾನಸಿರಿ'ಯಲ್ಲಿ ಆರಂಭವಾಗಲಿದೆ. ನಗರದಿಂದ 18 ಕಿ.ಮೀ., ದೂರದಲ್ಲಿರುವ ಬಿದರಕಟ್ಟೆ ವ್ಯಾಪ್ತಿಯ ಬರೋಬ್ಬರಿ 240 ಎಕರೆ ವಿಸ್ತೀರ್ಣದಲ್ಲಿ ತಲೆಎತ್ತಿರುವ ತುಮಕೂರು ವಿವಿಯ "ಜ್ಞಾನಸಿರಿ' ಕಾರ್ಯಚಟುವಟಿಕೆ ಆರಂಭಿಸಿದೆ.

17.50 ಕೋ. ರೂ., ವೆಚ್ಚದಲ್ಲಿ ಪರಿಶಿಷ್ಟ ಜಾತಿ-, ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಎರಡು ಪ್ರತ್ಯೇಕ ಹಾಸ್ಟೆಲ್​ಗಳು, ಹಾಗೂ ಎಸ್ಸಿ, ಎಸ್ಟಿ ಸಂಶೋಧನಾರ್ಥಿಗಳ ಹಾಸ್ಟೆಲ್​ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು ವಿದ್ಯಾರ್ಥಿಗಳ ಬಳಕೆಗೆ ನೀಡಬೇಕಿದೆ ಎಂದು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

5.53 ಕೋ.ರೂ., ರೂಸಾ ಅನುದಾನದಲ್ಲಿ ಸ್ನಾತಕೋತ್ತರ ಬಾಲಕರ ಹಾಸ್ಟೆಲ್​, 1.19 ಕೋ.ರೂ., ರೂಸಾ ಅನುದಾನದಲ್ಲಿ ಗ್ರಂಥಾಲಯ ಮತ್ತ ಮಾಹಿತಿ ವಿಜ್ಞಾನ ವಿಭಾಗದ ಪ್ರಯೋಗಾಲಯ ಹಾಗೂ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 2 ಕೋಟಿ ರೂ. ಅನುದಾನದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿಮಾರ್ಣ ಮಾಡಲಾಗಿದೆ. ರಾಜ್ಯ ಸರ್ಕಾರದ ಎಸ್​ಸಿಪಿ-, ಟಿಎಸ್​ಪಿ ಅನುದಾನದ 4.45 ಕೋ.ರೂ., ಪರೀಕ್ಷಾಪೂರ್ವ ತರಬೇತಿ ಕೇಂದ್ರ, 4.75 ಕೋ.ರೂ., ಕಲಾಭವನ, 2.50 ಕೋ.ರೂ., ಮುಖ್ಯದ್ವಾರ ಹಾಗೂ ಆವರಣ ಗೋಡೆ ನಿಮಾರ್ಣ ಕಾಮಗಾರಿ ಕುಂಟುತ್ತ ಸಾಗಿವೆ ಎಂದು ತಿಳಿಸಿದರು.

ವಿವಿ ಆಂತರಿಕ ನಿಧಿ ಬಳಕೆಗೆ ವಿರೋಧ: ವಿವಿ ಅಂತರಿಕ ನಿಧಿಯನ್ನೇ ಕಟ್ಟಡಗಳ ನಿರ್ಮಾಣ ಬಳಸಿಕೊಳ್ಳುತ್ತಿರುವ ಬಗ್ಗೆ ವಿವಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳ ವಲಯದಲ್ಲಿ ತೀವ್ರ ವಿರೋಧವಿದೆ. ಹಾಗಾಗಿ, ಕೇಂದ್ರ ಗ್ರಂಥಾಲಯ, ಒಳಾಂಗಣ ಕ್ರೀಡಾಂಗಣ, ಕೇಂದ್ರೀಕೃತ ಅಡುಗೆಮನೆ, ಎರಡನೆಯ ಶೈಕ್ಷಣಿಕ ಭವನ, ಆಡಳಿತ ಕಚೇರಿ ನಿರ್ಮಿಸುವ ಕನಸಿಗೆ ಸರ್ಕಾರದಿಂದ ವಿಶೇಷ ಅನುದಾನ ಬೇಕಿದೆ ಎಂದು ವೆಂಕಟೇಶ್ವರಲು ಸ್ಪಷ್ಟಪಡಿಸಿದರು.

ಹೊಸ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಗಳಿಗೆ ಊಟೋಪಚಾರಕ್ಕಾಗಿ ಕೆಫೆಟೇರಿಯಾ, ವೈಫೈ, ಜೆರಾಕ್ಸ್​, ಸ್ಟೇಷನರಿ ಸೌಲಭ್ಯ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪ್ರಯೋಗಾಲಯ, ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯಾಗಲಿರುವ ಕಲಾಭವನ ಕ್ಯಾಂಪಸ್​ ಅಂದ ಹೆಚ್ಚಿಸಿದೆ ಎಂದರು. ಸಾರಿಗೆ ಬಸ್​ ಸೇವೆ: ಅ.9ರಿಂದಲೇ ಕೆಎಸ್​ಆರ್​ಟಿಸಿ ಬಸ್​ ಸೇವೆ ಆರಂಭವಾಗಿದ್ದು ತರಗತಿಗಳು ಆರಂಭವಾಗಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸೇವೆ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತುಮಕೂರು ವಿವಿ ವಿಜ್ಞಾನ ವಿಭಾಗದ ಎಲ್ಲಾ ತರಗತಿಗಳು ಹೊಸ ಕ್ಯಾಂಪಸ್​ "ಜ್ಞಾನಸಿರಿ'ಯಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಸುಸಜ್ಜಿತ ಕಟ್ಟಡಗಳು ನಿರ್ಮಾಣವಾಗಿದೆ. ಅಗತ್ಯವಿರುವ ಎಲ್ಲಾ ಕಟ್ಟಡ ನಿರ್ಮಾಣವಾದ ಕೂಡಲೇ ಎಲ್ಲಾ ವಿಭಾಗಗಳು ಸ್ಥಳಾಂತರವಾಗಲಿದೆ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಮೂಲಕ ವಿವಿ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಲಿದ್ದೇವೆ. ಪ್ರೊ.ಎಂ.ವೆಂಕಟೇಶ್ವರಲು ಕುಲಪತಿ

ವಿವಿ ಆವರಣದಲ್ಲಿ ಫಿಲ್ಮ ಇನ್ಸಿಟಿಟ್ಯೂಟ್​ ! ತುಮಕೂರು ವಿವಿ ಹೊಸ ಕ್ಯಾಂಪಸ್​ನಲ್ಲಿ ಫಿಲ್ಮ ಇನ್ಸಿಟಿಟ್ಯೂಟ್​ ನಿರ್ಮಾಣ ಮಾಡುವ ಕುರಿತು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್​ ಬಾಬು ಜತೆ ಮಾತುಕತೆ ನಡೆಸಲಾಗಿದೆ. ಪುಣೆ ಹೊರತುಪಡಿಸಿ ಸಿನಿಮಾ ಬಗ್ಗೆ ಅಧ್ಯಯನ ನಡೆಸಲು ಫಿಲ್ಮ ಇನ್ಸಿಟಿಟ್ಯೂಟ್​ಗಳಿಲ್ಲ. ಈ ಹಿನ್ನೆಲೆಯಲ್ಲಿ 30 ಎಕರೆ ಜಾಗವನ್ನು ಫಿಲ್ಮ ಇನ್ಸಿಟಿಟ್ಯೂಟ್​ ನಿರ್ಮಾಣಕ್ಕೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು. ಬೃಹತ್​ ಶೈಕ್ಷಣಿಕ ಭವನ 40 ಕೋಟಿ ರೂ. ವೆಚ್ಚದಲ್ಲಿ ತುಮಕೂರು ವಿವಿಯ ಬೃಹತ್​ ಶೈಕ್ಷಣಿಕ ಭವನದ ನಿಮಾರ್ಣವು ಪೂರ್ಣಗೊಂಡಿದೆ. ಸುಸಜ್ಜಿತ ತರಗತಿ ಕೊಠಡಿಗಳು, ವಿಶಾಲ ಹಜಾರಗಳು, ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯ, ಬೋಧಕ-ಬೋಧಕೇತರ ಸಿಬ್ಬಂದಿ ಕಚೇರಿಗಳು ಸಜ್ಜುಗೊಂಡಿದ್ದು ತುಮಕೂರು ನಗರದಿಂದ ವಿವಿಯನ್ನು ಶ್ಟ್​ಿ ಮಾಡಲಾಗಿದೆ ಎಂದು ಪ್ರೊ.ಎಂ.ವೆಂಕಟೇಶ್ವರಲು ಮಾಹಿತಿ ನೀಡಿದರು.