ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ 'ಫೈಟರ್' ಸಿನಿಮಾ ನಿನ್ನೆ ಜನವರಿ 25 ರಂದು ತೆರೆಗೆ ಅಪ್ಪಳಿಸಿದೆ. ಈ ವಾರ ಸಾಲು ಸಾಲು ರಜೆಗಳಿರುವ ಕಾರಣ, ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ದಾಖಲೆ ಮಾಡುತ್ತದೆ ಎಂಬ ನಿರೀಕ್ಷೆಯಿದ್ದು, ಅದರಂತೆ ಮೊದಲ ದಿನವೇ 'ಫೈಟರ್' ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ.
ಈ ವಾರ ಸಾಲು ಸಾಲು ರಜೆಗಳಿರುವ ಕಾರಣ, ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ದಾಖಲೆ ಮಾಡುತ್ತದೆ ಎಂಬ ನಿರೀಕ್ಷೆಯಿದೆ. ಅದರಂತೆ ಮೊದಲ ದಿನ 'ಫೈಟರ್' ಚೆನ್ನೈನಲ್ಲಿ ಶೇಕಡಾ 59 ರಷ್ಟು ಅತ್ಯಧಿಕ ಆಕ್ಯುಪೆನ್ಸಿಯನ್ನು ದಾಖಲಿಸಿದ್ದು, ಹೈದರಾಬಾದ್, ಮುಂಬೈ, ದೆಹಲಿ ಎನ್‌ಸಿಆರ್ ಮತ್ತು ಜೈಪುರದಂತಹ ನಗರಗಳು ನಂತರದ ಸ್ಥಾನದಲ್ಲಿವೆ.
ಫೈಟರ್ ಸಿನಿಮಾ 2019ರ ಬ್ಲಾಕ್‌ಬಸ್ಟರ್ 'ವಾರ್' ಚಿತ್ರದ ಮೊದಲ ದಿನದ ಗಲ್ಲಾಪೆಟ್ಟಿಗೆಯ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಆದರೆ ವೈಆರ್‌ಎಫ್‌ನ ಸ್ಪೈ ಯೂನಿವರ್ಸ್‌ನ ಭಾಗವಾಗಿದ್ದ ಮತ್ತು ಸಿದ್ಧಾರ್ಥ್ ಆನಂದ್‌ನ ಆಕ್ಷನ್ ಸಿನಿಮಾ ತನ್ನ ಆರಂಭಿಕ ದಿನದಲ್ಲಿ 53.35 ಕೋಟಿ ರೂಪಾಯಿ ಗಳಿಸಿತ್ತು. ಅದೇ ವರ್ಷದಲ್ಲಿ, ನಟ ಹೃತಿಕ್ ರೋಷನ್ ನಟಿಸಿರುವ 'ಸೂಪರ್ 30' ಮೊದಲ ದಿನ 11 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಬಳಿಕ ವಿಶ್ವಾದ್ಯಂತ 210 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತು.
ಹೃತಿಕ್ ರೋಷನ್ ಚಿತ್ರಗಳ ಪೈಕಿ ಫೈಟರ್ ಐದನೇ ಅತಿ ಹೆಚ್ಚು ಓಪನಿಂಗ್ ಪಡೆದ ಚಿತ್ರವಾಗಿ ದಾಖಲೆ ಬರೆದಿದೆ. ಫಸ್ಟ್ ಡೇ ಶೋ ಕಲೆಕ್ಷನ್‌ನಲ್ಲಿ ವಾರ್ 53.35 ಕೋಟಿ, ಬ್ಯಾಂಗ್ ಬ್ಯಾಂಗ್ 27 ಕೋಟಿ ರೂ., ಕ್ರಿಶ್ 3 ರೂ. 25 ಕೋಟಿ ಮತ್ತು ಅಗ್ನಿಪಥ್ 22.8 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಈಗ ಫೈಟರ್ 22 ಕೋಟಿ ಗಳಿಸಿ ಐದನೇ ಸ್ಥಾನದಲ್ಲಿದೆ. ಫೈಟರ್ ಈಗಾಗಲೇ ಎರಡನೇ ದಿನದ ಅಡ್ವಾನ್ಸ್ ಬುಕಿಂಗ್‌ನಲ್ಲ್ಲಿ 13.2 ಕೋಟಿ ಮೊತ್ತದ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, ಆರಂಭಿಕ ದಿನದಲ್ಲಿ ಫೈಟರ್ 2.79 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಭಾರತದಲ್ಲಿ ಒಟ್ಟು 8.4 ಕೋಟಿ ರೂಪಾಯಿ ಟಿಕೆಟ್ ಮಾರಾಟವಾಗಿದೆ.