ನ್ಯೂಸ್

ಬಸ್​ನಲ್ಲಿ ವಿಂಡೋ ಸೀಟ್​ಗಾಗಿ ಗಲಾಟೆ; ಯುವಕರ ನಡುವೆ ಜಗಳ, ಚಾಕು ಇರಿತ| knife-attack

ಬೆಳಗಾವಿ:ಕಿಟಕಿ ಪಕ್ಕದ ಸೀಟ್​ಗಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪಂಚಬಾಳೇಕುಂದ್ರಿ ಗ್ರಾಮದಿಂದ ಸಿಟಿ ಬಸ್ ಟರ್ಮಿನಲ್​ಗೆ ಬರುತ್ತಿದ್ದ ಬಸ್ ನಲ್ಲಿ ವಿದ್ಯಾರ್ಥಿ ಹಾಗೂ ಯುವಕರ ನಡುವೆ ಕಿಟಕಿ ಪಕ್ಕದ ಸೀಟ್​ಗಾಗಿ ಜಗಳ ಉಂಟಾಗಿದೆ. ಸೀಟ್‌ಗಾಗಿ ನಡೆದ ಜಗಳದಿಂದ ಚಾಕು ಇರಿತ ಸಂಭವಿಸಿದೆ.

ಪಂತಬಾಳೇಕುಂದ್ರಿ-ಸಿಬಿಟಿ ಬಸ್‌ನಲ್ಲಿ ಬೆಳಗಾವಿ ನಗರಕ್ಕೆ ಬರುತ್ತಿದ್ದಾಗ, ಕಿಟಕಿ ಸೀಟಿನ ವಿಚಾರವಾಗಿ ಮಾಜ್ ಮತ್ತು ಕೆಲವು ಅಪರಿಚಿತ ಯುವಕರ ಮಧ್ಯೆ ವಾಗ್ವಾದ ನಡೆದಿತ್ತು. ಈ ಜಗಳ ವಿಕೋಪಕ್ಕೆ ಹೋಗಿದ್ದರಿಂದ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಮಜ್ಜು ಸನದಿ (20) ಎಂಬ ಯುವಕನ ಎದೆ ಭಾಗಕ್ಕೆ ಯುವಕರ ಗ್ಯಾಂಗ್​ ಒಂದು ಚಾಕು ಇರಿದು ಪರಾರಿ ಆಗಿದೆ. ಗಾಯಾಳು ಮಜ್ಜುಗೆ ಬೆಳಗಾವಿ ಬಿಮ್ಸ್​ ಆಸ್ಪತ್ರೆ ಐಸಿಯುನಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಡಿಸಿಪಿ ರೋಹನ್​ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

(ಏಜೆನ್ಸೀಸ್)

ಇನ್ನೂ ಈ ಬಗ್ಗೆ ಪೊಲೀಸ್ ಉಪ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ರೋಹನ್ ಜಗದೀಶ ಮಾತನಾಡಿದ್ದು, ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದೇವೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.