ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಸೋಮಣ್ಣ, ವಿ.ರಾಮು, ಮೇಡಿಹಾಳ ರಾಘವೇಂದ್ರ, ರಾಜೇಶ್ವರಿ ಇದ್ದರು. 
ನ್ಯೂಸ್

ಗಡಿಯಲ್ಲಿ ಕನ್ನಡ ಭಾಷೆ ಅಸ್ತಿತ್ವಕ್ಕೆ ಹೋರಾಟ ಅನಿವಾರ್ಯ

ಕೋಲಾರ: ಕನ್ನಡ ಭಾಷೆಯು ಶ್ರೀಮಂತಗೊಂಡಿದ್ದರೂ ಸಹ ಗಡಿಯಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎ.ಎಲ್.ಅನಿಲ್ ಕುಮಾರ್ ಕಳವಳ ವ್ಯಕ್ತಪಡಿಸಿದರು.

ನಗರದ ಸುವರ್ಣ ಕನ್ನಡ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡಕ್ಕೆ ಧಕ್ಕೆಯುಂಟು ಎದುರಾದಾಗ ಕರ್ನಾಟಕ ರಕ್ಷಣಾ ವೇದಿ ಮುಂಚೂಣಿಯಲ್ಲಿ ನಿಂತು ನಡೆಸಿದ ಹೋರಾಟಗಳು ಇತಿಹಾಸ ಪುಟಗಳಲ್ಲಿ ಉಳಿದಿದೆ ಎಂದರು.

ಭಾಷೆೆಯ ಬಗ್ಗೆ ಗಂಭೀರವಾಗಿ ಚರ್ಚೆಗಳು ಆಗುತ್ತಿವೆ. ಕನ್ನಡಕ್ಕೆ 3000 ವರ್ಗಷಳ ಇತಿಹಾಸ ಇದೆ. ಕರ್ನಾಟಕ ಏಕೀಕರಣವಾಗಿ 50 ವರ್ಗಷಳು ಪೂರೈಸಿದ್ದು, ಭಾಷೆಯ ಅಸ್ತಿತ್ವಕ್ಕೆ ಹೋರಾಟ ನಡೆಸಬೇಕಾದ ಅನಿವಾರ್ಯತೆಯಲ್ಲಿ ಇದ್ದೇವೆ ಎಂದು ವಿಷಾದಿಸಿದರು.

ರಾಜ್ಯದಲ್ಲಿ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಲು ರಕ್ಷಣಾ ವೇದಿಕೆ ನಡೆಸಿದ ಪ್ರತಿಭಟನೆಯ ಫಲವಾಗಿ ಅದು ರಾಜ್ಯದಲ್ಲಿ ಜಾರಿಗೆ ಬಂದಿದೆ. ಸಿದ್ದರಾಮಯ್ಯ ಅವರು ಮೊದಲು ಶಾಸಕರಾದಾಗ ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷರಾಗಿ ಕನ್ನಡದ ಬಗ್ಗೆ ಬದ್ಧತೆ ಹೊಂದಿದ್ದಾರೆ ಎಂದು ತಿಳಿಸಿದರು.

ಎಂಇಎಸ್ ಉಪಟಳ ಯಾವ ರೀತಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರ ವಿರುದ್ಧ ಮುಂಚೂಣಿಯಲ್ಲಿ ಹೋರಾಟ ಮಾಡಿದ್ದು, ಕನಾಟಕ ರಕ್ಷಣಾ ವೇದಿಕೆ. ಬೆಳಗಾವಿಯನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಸುವರ್ಣಸೌಧ ನಿರ್ಮಾಣ ಮಾಡುತ್ತಾರೆ. ಯಡಿಯೂರಪ್ಪ ಉದ್ಘಾಟಿಸುತ್ತಾರೆ, ಪಕ್ಷ ಏನೇ ಇದ್ದರೂ ಕನ್ನಡಕ್ಕಾಗಿ ಹಲವು ಮಂದಿ ವಿವಿಧ ರೀತಿ ಕೊಡುಗೆ ನೀಡಿದ್ದಾರೆ ಎಂದು ಅನಿಲ್‌ಕುಮಾರ್ ಸ್ಮರಿಸಿದರು.

ಜಿಲ್ಲೆಯ ಗಡಿಯಲ್ಲಿ ಧಕ್ಕೆ ಬಂದಾಗ, ನರಸಾಪುರ, ವೇಮಗಲ್, ಮಾಲೂರಿನ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ನ್ಯಾಯ ದೊರಕಿಸಲು ಹೋರಾಟ ನಡೆಸಿ ನ್ಯಾಯ ಕೊಡಿಸಿದ್ದಾರೆ. ಕೆಲ ಮಾಲ್‌ಗಳು ನಾಮಫಲಕ ಹಾಕಿರಲಿಲ್ಲ. ಹೋರಾಟದ ಫಲವಾಗಿ ಎಲ್ಲೆಲ್ಲೂ ಕನ್ನಡ ರಾರಾಜಿಸುತ್ತಿದೆ ಎಂದರು.

*ಎಂಇಎಸ್ ಹಾವಳಿಗೆ ಪ್ರತ್ಯುತ್ತರ

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಎಂಇಎಸ್ ಹಾವಳಿಯನ್ನು ವೇದಿಕೆಯ ಹೋರಾಟಗಳಿಂದ ಹತ್ತಿಕ್ಕಲಾದ ಇತಿಹಾಸ ಇದೆ. ಇದರಿಂದಾಗಿ ಬೆಳಗಾವಿ ಭಾಗದಲ್ಲಿ ಕನ್ನಡ ಉಳಿದಿದೆ ಎಂದು ಬಣ್ಣಿಸಿದರು. ಬೆಂಗಳೂರಿನಲ್ಲಿ ಕನ್ನಡ ನಾಮಫಲಕವನ್ನು ದುರ್ಬಿನು ಹಾಕಿಕೊಂಡು ಹುಡಕಬೇಕಾಗಿತ್ತು. ರಕ್ಷಣಾ ವೇದಿಕೆ ಸೇರಿ ಕನ್ನಡಪರ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ರಾರಾಜಿಸುತ್ತಿವೆ. ಕನ್ನಡ ಚಳವಳಿಗಳು ಬಹಳ ಹಿರಿದು ಎಂದು ಗೋವಿಂದರಾಜು ಅಭಿಪ್ರಾಯಪಟ್ಟರು.

* ಇಂಗ್ಲಿಷ್ ವ್ಯಾಮೋಹ ಸಲ್ಲ

ಸಮಾಜಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ, ದೇಶದ ಜನತೆಗೆ ಕರ್ನಾಟಕ, ಬೆಂಗಳೂರು ಬೇಕಾಗಿದೆ, ಏಕೆಂದರೆ ಶಾಂತಿಪ್ರಿಯರು ಎಂಬ ಭಾವನೆ. ಆದರೆ ನಮ್ಮನವರಲ್ಲಿ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಭಾಷೆ ಬಳಕೆದಾರರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಾಡು, ನುಡಿ ನಮ್ಮೆಲ್ಲರ ಉಸಿರು, ಜಿಲ್ಲೆಯಲ್ಲಿ ಕನ್ನಡವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರದಲ್ಲಿ ರಕ್ಷಣಾ ವೇದಿಕೆಯಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕನ್ನಡ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರೆಯಲೇ ಬೇಕು ಎಂದು ಎಚ್ಚರಿಸಿದರು.

ಆರ್ಥಿಕವಾಗಿ ಸದೃಢರಾದರೂ ಎಡವಬಾರದು, ಅಕ್ಷರ ಜೋಡಣೆ, ಬರವಣಿಗೆ ಬದಲಾಗಿದೆ. ಕನ್ನಡ ಮಾತನಾಡಲು ಬಳಕೆ ಆಗುತ್ತಿದೆ. ಕನ್ನಡ ಬರೆಯುವವರನ್ನು ಹುಡುಕಾಡುವ ಪರಿಸ್ಥಿತಿ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಪಾಲಕರು ಇಂಗ್ಲಿಷ್ ಕಲಿಸುವುದಕ್ಕೆ ಸಿಮೀತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

* ನಾಡು-ನುಡಿ ವಿಚಾರದಲ್ಲಿ ರಾಜಿ ಇಲ್ಲ

ರಾಜ್ಯದಲ್ಲಿ ರಕ್ಷಣಾ ವೇದಿಕೆಯು 75 ಲಕ್ಷಕ್ಕೂ ಹೆಚ್ಚು ಕಾರ್ಯಕರ್ಯರ ಸದಸ್ಯತ್ವ ಹೊಂದಿದೆ. ಜಿಲ್ಲೆಯಲ್ಲಿ 25 ವರ್ಷಗಳಿಂದ ನೀರಾವರಿ ವಿಚಾರ, ಬಿಜಿಎಂಎಲ್‌ಗೆ ಬಿಬಿಎಂಪಿ ಕಸ ತುಂಬಿಸುವುದು, ಮಹಿಳಾ ಕಾಲೇಜನ್ನು ಬಿಜಾಪುರಕ್ಕೆ ಸೇರಿಸುವುದು ವಿರೋಽಸಿ ನಡೆದ ಹೋರಾಟಗಳಿಗೆ ಜಯ ಸಿಕ್ಕಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಹೇಳಿದರು. ವೇದಿಕೆಯಿಂದ ಗೋಕಾಕ್ ಮಾದರಿ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆ, ನಮಗೆ ಜೈಲು, ಕೇಸು ಹೊಸದೇನಲ್ಲ. ನಾಡು, ನುಡಿ ವಿಚಾರದಲ್ಲಿ ರಾಜೀಯಾಗುವುದಿಲ್ಲ. ಹೋರಾಟಗಳು ನಡೆಯುತ್ತಲೇ ಇರುತ್ತವೆ. ಇದೀಗ ಕನ್ನಡಿಗರಿಗೆ ಉದ್ಯೋಗದ ಹಕ್ಕು ಕಲ್ಪಿಸಲು ಒತ್ತಾಯಿಸಿ ಹೋರಾಟ ನಡೆಯುತ್ತಿದ್ದು, ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಿ, ಉಪಾಧ್ಯಕ್ಷೆ ಸಂಗೀತಾ, ಕೆಯುಡಿಎ ಅಧ್ಯಕ್ಷ ಮಹಮದ್ ಹನೀಫ್, ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ನಾಗನಂದ ಕೆಂಪರಾಜ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ನಾಗನಾಳ ಸೋಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಟಿಎಪಿಸಿಎಂಎಸ್ ಅಧ್ಯಕ್ಷ ವಿ.ರಾಮು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವಿಜಯಲಕ್ಷ್ಮಿ, ಸಮಾಜ ಸೇವಕ ಪಲ್ಲವಿಮಣಿ, ವೇದಿಕೆಯ ಪದಾಽಕಾರಿಗಳಾದ ಲತಾಬಾಯಿ ಮಡಿಕಾರ್, ಎಂ.ಎಸ್.ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.