ಶಿಮ್ಲಾ: 2021ರಲ್ಲಿ ಉತ್ತರಪ್ರದೇಶದ ಭಾಗ್ಪತ್ನಲ್ಲಿ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಚಾಟ್ಸ್ ಅಂಗಡಿ ಮಾಲೀಕರ ನಡುವೆ ಗಲಾಟೆ ಆಗಿದ್ದ ವಿಡಿಯೋ ಹೆಚ್ಚು ಸದ್ದು ಮಾಡಿತ್ತು. ಇನ್ನು ಈ ವಿಡಿಯೋವನ್ನು ನೆನಪಿಸುವಂತಹ ಘಟನೆ ಶಿಮ್ಲಾದ ಹಣ್ಣಿನ ಮಾರುಕಟ್ಟೆಯಲ್ಲಿ ನಡೆದಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈ ವಿಡಿಯೋವನ್ನು ಭಾಗ್ಪತ್ ಬ್ಯಾಟಲ್ 2.0 ಎಂದು ಹೆಸರಿಸಿದ್ದಾರೆ.
ಇದನ್ನೂ ಓದಿ: 41ರ ವಯಸ್ಸಿನಲ್ಲಿ 550 ಮಕ್ಕಳಿಗೆ 'ತಂದೆ'ಯಾದ ವ್ಯಕ್ತಿ!
ವಿಡಿಯೋದಲ್ಲಿ ಕಂಡು ಬರುವ ಹಾಗೆ ಹಣ್ಣಿನ ವ್ಯಾಪಾರಿಗಳು ಒಬ್ಬರ ಮೇಲೆ ಒಬ್ಬರು ದೊಣ್ಣೆ, ಹಣ್ಣಿನ ಕ್ರೇಟ್, ಇಟ್ಟಗೆಯಿಂದ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಪರಸ್ಪರ ಹೊಡೆದಾಡುತ್ತಿರುವುದು ಕಂಡು ಬರುತ್ತದೆ.
ಪೊಲೀಸರ ಮಧ್ಯಪ್ರವೇಶದಿಂದ ಜಗಳ ತಿಳಿಗೊಂಡಿದ್ದು ಹಣ್ಣುಗಳ ಹರಾಜು ಕೂಗುವ ವೇಳೆ ಇಬ್ಬರು ವ್ಯಾಪಾರಿಗಳ ನಡುವೆ ಹೊಡೆದಾಟ ಶುರುವಾಗಿದೆ ಎಂದು ತಿಳಿದು ಬಂದಿದೆ.