ನ್ಯೂಸ್

ಸಾಕು ನಾಯಿ ವಿಚಾರಕ್ಕೆ ಇಬ್ಬರ ನಡುವೆ ಜಗಳ: ಪಿಜ್ಜಾ ಹಂಚುವ ಶಿಕ್ಷೆ ನೀಡಿದ ಕೋರ್ಟ್​! | Pizza

Pizza: ಶಿಶು ಪಾಲನ ಕೇಂದ್ರದ ಮಕ್ಕಳಿಗೆ ಪಿಜ್ಜಾ ಮತ್ತು ಮಜ್ಜಿಗೆ ವಿತರಿಸಬೇಕೇಂದು ಸಾಕು ನಾಯಿ ವಿಚಾರಕ್ಕೆ ಜಗಳವಾಡಿ ಕೋರ್ಟ್​ ಮೆಟ್ಟಿಲೇರಿದ್ದ ಇಬ್ಬರಿಗೆ ದೆಹಲಿ ಹೈಕೋರ್ಟ್​ ಮಂಗಳವಾರ (ಸೆ.23) ಆದೇಶಿಸಿದೆ.

ದೆಹಲಿಯ ಜಿಟಿಬಿ ಆಸ್ಪತ್ರೆ ಬಳಿಯಿರುವ ಸಂಸ್ಕಾರ ಆಶ್ರಮದಲ್ಲಿನ ಮಕ್ಕಳಿಗೆ ಅಮುಲ್ 'ಚಾಚ್' ಟೆಟ್ರಾ ಪ್ಯಾಕ್‌ಗಳು ಮತ್ತು ಮಿಶ್ರ ತರಕಾರಿ ಪಿಜ್ಜಾಗಳನ್ನು ಬಡಿಸಿದರೆ ನೆರೆಹೊರೆಯವರ ಇಬ್ಬರ ಪೊಲೀಸ್ ಪ್ರಕರಣಗಳು ರದ್ದಾಗುತ್ತವೆ ಎಂದು ನ್ಯಾಯಾಮೂರ್ತಿ ಅರುಣ್​ ಮೋಂಗಾ ಪೀಠ ಹೇಳಿದೆ ಎಂದು ಬಾರ್​ ಆ್ಯಂಡ್​ ಬೆಂಜ್​ ವರದಿ ಮಾಡಿದೆ.

ಪಿಜ್ಜಾಗಳನ್ನು ಒಬ್ಬ ದೂರುದಾರರು ತಯಾರು ಮಾಡುತ್ತಾರೆ. ಅದನ್ನು ಮತ್ತೊಬ್ಬ ದೂರುದಾರ ಜಂಟಿಯಾಗಿ ಬಡಿಸಬೇಕು. ಇದು ಸಮುದಾಯ ಸೇವೆ ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಈ ಗಲಾಟೆ ನೆರೆಹೊರೆಯವರ ಖಾಸಗಿ ವಿಷಯವಾಗಿದ್ದು, ಪರಸ್ಪರರ ವಿರುದ್ಧದ ಕ್ರಿಮಿನಲ್ ಪ್ರಕರಣಗಳು ಮುಂದುವರೆಯುವುದು ಒಳ್ಳೆಯದಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಇನ್ನು ಈ ಘಟನೆ ಮೇ 5 ರಂದು ನಡೆದಿದ್ದು, ಸಾಕುಪ್ರಾಣಿಗಳನ್ನು ನಿರ್ವಹಿಸುವ ವಿಚಾರದಲ್ಲಿ ಇಬ್ಬರು ನೆರೆಹೊರೆಯವರ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಜಗಳವಾಗಿ ಮಾರ್ಪಟ್ಟಿದೆ. ಮಾನಸ ಸರೋವರ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಬೆದರಿಕೆ ಅನ್ವಯಿಸಿ ಇಬ್ಬರ ಮೇಲೆ ಎಫ್‌ಐಆರ್‌ಗಳನ್ನು ದಾಖಲಿಸಿವೆ.(ಏಜೆನ್ಸೀಸ್​)