Himanta Biswa Sharma: ಬಂಗಾಳಿ ಮಾತನಾಡುವ ಜನರಿಗೆ ಅಸ್ಸಾಂನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದಿಂದ ಬೆದರಿಕೆ ಇದೆ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಕ್ಕೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ತಿರುಗೇಟು ನೀಡಿದ್ದಾರೆ. ಈ ಹೋರಾಟವು ಗಡಿಯಾಚೆಯಿಂದ ಅನಿಯಂತ್ರಿತ ವಿರುದ್ಧವಾಗಿದೆಯೇ ಹೊರತು ನಾಗರಿಕರೊಂದಿಗೆ ಅಲ್ಲ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಅಸ್ಸಾಂ ಸಿಎಂ, ನಾವು ನಮ್ಮದೇ ಜನರ ವಿರುದ್ಧ ಹೋರಾಡುತ್ತಿಲ್ಲ, ಗಡಿಯಾಚೆಯಿಂದ ಒಳನುಸುಳುತ್ತಿರುವ ಅನಿಯಂತ್ರಿತ ಮುಸ್ಲಿಂರನ್ನು ನಾವು ನಿರ್ಭಯವಾಗಿ ವಿರೋಧಿಸುತ್ತಿದ್ದೇವೆ. ಇದು ಈಗಾಗಲೇ ಅತಂಕಾರಿ ಜನಸಂಖ್ಯೆ ಬದಲಾವಣೆಗೆ ಕಾರಣವಾಗಿದೆ. ಹಲವಾರು ಜಿಲ್ಲೆಗಳಲ್ಲಿ ಹಿಂದೂಗಳು ಈಗ ತಮ್ಮದೇ ಆದ ನೆಲದಲ್ಲಿ ಅಲ್ಪಸಂಖ್ಯಾತರಾಗುವ ಅಂಚಿನಲ್ಲಿದ್ದಾರೆ ಎಂದಿದ್ದಾರೆ.
ಅಲ್ಲದೇ ಇದು ರಾಜಕೀಯ ವಿಚಾರವಲ್ಲ, ಇದು ವಾಸ್ತವ. ಭಾರತದ ಸುಪ್ರಿಂಕೋರ್ಟ್ ಕೂಡ ಅಂತಹ ಒಳನುಸುಳುವಿಕೆಯನ್ನು ಬಾಹ್ಯ ಆಕ್ರಮಣ ಎಂದು ಕರೆದಿದೆ. ಆದರೂ ನಾವು ನಮ್ಮ ಭೂಮಿ, ಸಂಸ್ಕೃತಿ ಮತ್ತು ಗುರುತುನ್ನು ರಕ್ಷಿಸಲು ಹೊರಟಾಗ, ನೀವು ಅದನ್ನು ರಾಜಕೀಯಗೊಳಿಸಿದ್ದಿರ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಬ್ಯಾನರ್ಜಿ, ಅಸ್ಸಾಂನಲ್ಲಿ ಬಿಜೆಪಿ ಅನುಸರಿಸುತ್ತಿರುವ ವಿಭಜಕ ಕಾರ್ಯಸೂಚಿಯನ್ನು ಖಂಡಿಸಿದರು. ಆಡಳಿತ ಪಕ್ಷವು ಬಂಗಾಳಿ ಮಾತನಾಡುವ ನಾಗರಿಕರನ್ನು ತಮ್ಮ ಭಾಷೆಯ ಗುರುತನ್ನು ಪ್ರತಿಪಾದಿಸುವುದಕ್ಕಾಗಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.(ಏಜೆನ್ಸೀಸ್)